ಜನರ ಹೆಣದ ಮೇಲೆ ಹಣ ಮಾಡಲು ಹೊರಟ ಬಿಜೆಪಿ ಸರಕಾರ: ಕಾಂಗ್ರೆಸ್ ಟೀಕೆ

ಬೆಂಗಳೂರು, ಜೂ.3: ಲಸಿಕೆಗಳು ಕೇಂದ್ರ ಸರ್ಕಾರಕ್ಕೆ 150 ರೂಪಾಯಿಗಳಿಗೆ ಸಿಗುವುದಾದರೆ ದೇಶಕ್ಕೆ ಅಗತ್ಯವಾದ ಸಂಪೂರ್ಣ ಲಸಿಕೆಗಳನ್ನು ಏಕೆ ಖರೀದಿಸಲಿಲ್ಲ ಎಂದು ಉಚ್ಛ ನ್ಯಾಯಾಲಯ ಪ್ರಶ್ನಿಸಿದೆ. ಜನರ ಹೆಣದ ಮೇಲೆ ಹಣ ಮಾಡಲು ಹೊರಟ ಬಿಜೆಪಿ ಸರ್ಕಾರ ಲಸಿಕೆ ಕಾರ್ಯಕ್ರಮವನ್ನು ವ್ಯಾಪಾರಕ್ಕೆ ಬಳಸಿಕೊಂಡಿರುವುದನ್ನು ಸಮರ್ಥಿಸಿಕೊಳ್ಳುತ್ತದೆಯೇ!? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ಇದುವರೆಗೂ ಎಲ್ಲಾ ಲಸಿಕೆಗಳೂ ಸಮಗ್ರ ರಾಷ್ಟ್ರೀಯ ನೀತಿಯಾನ್ನಾಗಿಸಿ ಕಾರ್ಯಕ್ರಮ ರೂಪಿಸಲಾಗಿತ್ತು. ಆದರೆ ದೇಶ ಎದುರಿಸುತ್ತಿರುವ ಬಹುದೊಡ್ಡ ಪಿಡುಗಿನಲ್ಲಿಯೂ ನರೇಂದ್ರ ಮೋದಿ ಅವರು ತಮ್ಮ 'ವ್ಯಾಪಾರಿ ನೀತಿ'ಯನ್ನು ಅನುಸರಿಸಿದ್ದರು. ಬಿಜೆಪಿಯ ಈ ಲಸಿಕೆ ವ್ಯಾಪಾರವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ, ಇನ್ನಾದರೂ ಬುದ್ದಿ ಬರುವುದೇ? ಎಂದು ಕಿಡಿಕಾರಿದೆ.
ಇದುವರೆಗೂ ಎಲ್ಲಾ ಲಸಿಕೆಗಳೂ ಸಮಗ್ರ ರಾಷ್ಟ್ರೀಯ ನೀತಿಯಾನ್ನಾಗಿಸಿ ಕಾರ್ಯಕ್ರಮ ರೂಪಿಸಲಾಗಿತ್ತು.
— Karnataka Congress (@INCKarnataka) June 3, 2021
ಆದರೆ ದೇಶ ಎದುರಿಸುತ್ತಿರುವ ಬಹುದೊಡ್ಡ ಪಿಡುಗಿನಲ್ಲಿಯೂ @narendramodi ಅವರು ತಮ್ಮ 'ವ್ಯಾಪಾರಿ ನೀತಿ'ಯನ್ನು ಅನುಸರಿಸಿದ್ದರು.
ಬಿಜೆಪಿಯ ಈ ಲಸಿಕೆ ವ್ಯಾಪಾರವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ, ಇನ್ನಾದರೂ ಬುದ್ದಿ ಬರುವುದೇ? pic.twitter.com/IyUv5sDswq







