ದಿಲ್ಲಿಯಲ್ಲಿ 500 ಕ್ಕಿಂತ ಕಡಿಮೆಯಾದ ದೈನಂದಿನ ಕೋವಿಡ್ -19 ಪ್ರಕರಣ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಕಳೆದ 24 ಗಂಟೆಗಳಲ್ಲಿ 487 ದೈನಂದಿನ ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು,ಸಕ್ರಿಯ ಪ್ರಕರಣಗಳ ಸಂಖ್ಯೆ 8,748 ಕ್ಕೆ ಕುಸಿದಿದೆ.
ಪಾಸಿಟಿವಿಟಿ ಪ್ರಮಾಣವು ಶೇಕಡಾ 0.61 ಕ್ಕೆ ಇಳಿದಿದೆ., ಗುರುವಾರ ಸೋಂಕಿನ ಪ್ರಮಾಣವು ಮಾರ್ಚ್ 16ರ ಬಳಿಕ ಮೊದಲ ಬಾರಿ ಕಡಿಮೆಯಾಗಿದೆ. ಮಾರ್ಚ್ ನಲ್ಲಿ 425 ಪ್ರಕರಣಗಳು ವರದಿಯಾಗಿದ್ದವು. ಕೊನೆಯದಾಗಿ ಎಪ್ರಿಲ್ 16 ರಂದು ವರದಿಯಾದ ಸೋಂಕಿನ ಪ್ರಮಾಣವು ಶೇಕಡಾ 0.61 ರಷ್ಟಿತ್ತು.
ದಿಲ್ಲಿಯಲ್ಲಿ ಇಲ್ಲಿಯವರೆಗೆ ಒಟ್ಟು 14,27,926 ಕೋವಿಡ್ -19 ಪ್ರಕರಣಗಳು ವರದಿಯಾಗಿವೆ.
ಕಳೆದ 24 ಗಂಟೆಗಳಲ್ಲಿ ನಗರವು 45 ಕೊರೋನವೈರಸ್ ಸಂಬಂಧಿತ ಸಾವುಗಳನ್ನು ದಾಖಲಿಸಿದೆ. ಇದು ಎಪ್ರಿಲ್ 10 ರ ಬಳಿಕ ಕಡಿಮೆ ಸಾವಿನ ಸಂಖ್ಯೆಯಾಗಿದೆ. ಎಪ್ರಿಲ್ ನಲ್ಲಿ ನಗರದಲ್ಲಿ 39 ಸಾವುಗಳು ದಾಖಲಾಗಿದ್ದವು. ಕೊರೋನ ವೈರಸ್ ಇಲ್ಲಿಯವರೆಗೆ 24,447 ಜೀವಗಳನ್ನು ಬಲಿ ಪಡೆದಿದೆ.
Next Story





