ವಿದೇಶಕ್ಕೆ ತೆರಳುವವರಿಗೆ ಕೋವಿಡ್ ಲಸಿಕೆ ಲಭ್ಯ
ಉಡುಪಿ, ಜೂ.3:18ರಿಂದ 44 ವರ್ಷದೊಳಗಿನ ಆಯ್ದ ಗುಂಪುಗಳಿಗೆ ಕಳೆದ ಮೇ 27ರಿಂದ ಕೋವಿಡ್-19 ಲಸಿಕೆ ನೀಡುವುದನ್ನು ಪ್ರಾರಂಭಿ ಸಲಾಗಿದ್ದು, ಅದರಂತೆ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು ಹಾಗೂ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವವರಿಗೆ ಕೋವಿಡ್ ಲಸಿಕೆಯನ್ನು ವಿಶೇಷ ಆದ್ಯತೆಯಲ್ಲಿ ನೀಡಲಾಗುತ್ತಿದೆ.
ಇದರ ನೋಡೆಲ್ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರನ್ನು ನೇಮಿಸಲಾಗಿದೆ. ಅಪರ ಜಿಲ್ಲಾಧಿಕಾರಿಯವರು ಲಸಿಕೆ ನೀಡುವ ಬಗ್ಗೆ ಅನೆಕ್ಷನ್-3ನ್ನು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೀಡಲಿದ್ದಾರೆ. ಇದಕ್ಕಾಗಿ ಈ ಕೆಳಗಿನ ದಾಖಲಾತಿಯೊಂದಿಗೆ ಕಚೇರಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ದಾಖಲೆಗಳು: ಅರ್ಜಿ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವೀಸಾ, ವ್ಯಾಸಂಗದ ಬಗ್ಗೆ ವಿದ್ಯಾಸಂಸ್ಥೆಯ ಪತ್ರ (ಆಫರ್ ಲೆಟರ್) ಇವುಗಳ ಮೂಲಪ್ರತಿ ಹಾಗೂ ಸ್ವಯಂದೃಢೀಕರಿಸಿದ ಝೆರಾಕ್ಸ್ ಪ್ರತಿಯನ್ನು ಹೊಂದಿರ ಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 0820- 2574802 ಅಥವಾ 1077ನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





