ಮದ್ರಸ ಶಿಕ್ಷಕರಿಗೂ ಪ್ಯಾಕೇಜ್ ವಿಸ್ತರಿಸಲು ದಾರಿಮಿ ಉಲಮಾ ಒಕ್ಕೂಟ ಆಗ್ರಹ
ಮಂಗಳೂರು, ಜೂ.3: ರಾಜ್ಯ ಸರಕಾರವು ಈ ಹಿಂದೆ ಅರ್ಚಕರಿಗೆ ಪರಿಹಾರ ಘೋಷಿಸಿದಂತೆ ಎಲ್ಲಾ ಧಾರ್ಮಿಕ ಗುರುಗಳಿಗೂ ಪರಿಹಾರ ನೀಡ ಬೇಕೆಂಬ ಸಂಘಟನೆಗಳ ಮನವಿಗೆ ಸ್ಪಂದಿಸಿದ ರಾಜ್ಯ ಸರಕಾರ ಈಗ ಮಸೀದಿ ಸಿಬ್ಬಂದಿಗೆ ಪ್ಯಾಕೇಜ್ ಬಿಡುಗಡೆ ಮಾಡಿದೆ.ಅದರಂತೆ ಮದ್ರಸದ ಶಿಕ್ಷಕರಿಗೂ ಪ್ಯಾಕೇಜ್ ನೀಡಬೇಕು ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಒತ್ತಾಯಿಸಿದೆ.
ಒಕ್ಕೂಟದ ಅಧ್ಯಕ್ಷ ಎಸ್‌ಬಿ ದಾರಿಮಿ ಹೇಳಿಕೆಯೊಂದನ್ನು ನೀಡಿ ಶಿಕ್ಷಕ ವರ್ಗವು ಕೊರೋನ ಸಂತ್ರಸ್ತರ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಸರಕಾರಿ ಶಿಕ್ಷಕರಿಗೆ ಯಥಾಪ್ರಕಾರ ಭತ್ತೆ ಸಿಗುತ್ತಿದ್ದರೂ ಖಾಸಗಿ ಅಧ್ಯಾಪಕರಿಗೆ ಮತ್ತು ಮದ್ರಸದ ಶಿಕ್ಷಕರಿಗೆ ಕೊರೋನದಿಂದ ಬಹಳ ಸಂಕಷ್ಟ ಎದುರಾಗಿದೆ. ಬಡತನದಲ್ಲೇ ಕಾಲ ಕಳೆಯುತ್ತಿರುವ ಈ ವರ್ಗ ಈಗ ಲಾಕ್‌ಡೌನ್ ನಿಮಿತ್ತ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ. ಆದ್ದರಿಂದ ಈಗ ಘೋಷಿಸ ಲಾದ ಪ್ಯಾಕೇಜನ್ನು ಮದ್ರಸ ಶಿಕ್ಷಕರಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
Next Story





