ಕಣಚೂರು ಆಸ್ಪತ್ರೆಯಲ್ಲಿ ಸರಕಾರಿ ದರದಲ್ಲಿ ಲಸಿಕೆ ಲಭ್ಯ
ಮಂಗಳೂರು, ಜೂ.3: ಕೋವಿಡ್ ನಿಗ್ರಹಕ್ಕಾಗಿರುವ ಲಸಿಕೆಯು ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಸರಕಾರಿ ದರದೊಂದಿಗೆ ದೊರೆಯಲಿದೆ. ಹಾಗಾಗಿ 18 ವರ್ಷಕ್ಕಿಂತ ಮೆಲ್ಪಟ್ಟವರು ತಮ್ಮ ಹೆಸರನ್ನು ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡು ಕೋವಿಡ್ ಲಸಿಕೆ ಯನ್ನು ಪಡೆಯಬಹುದು. 45 ವರ್ಷ ಮೇಲ್ಪಟ್ಟವರು ಆಧಾರ್ ಕಾರ್ಡ್‌ನೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಲಸಿಕೆಯನ್ನು ಪಡೆಯಬಹುದು ಎಂದು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಕನಚೂರು ಮೋನು ತಿಳಿಸಿದ್ದಾರೆ.
ಅಲ್ಲದೆ ಕೋವಿಡ್-19 ತಡೆಗಟ್ಟುವ ಸಲುವಾಗಿ ಜಿಲ್ಲೆಯ ಪ್ರತಿಯೊಬ್ಬರು ಲಸಿಕೆಯನ್ನು ಹಾಕಿಸಿಕೊಂಡು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಸರಕಾರದೊಂದಿಗೆ ಕೈ ಜೋಡಿಸುವಂತೆ ಅವರು ಮನವಿ ಮಾಡಿದ್ದಾರೆ.
Next Story





