ತವಸ್ಸುಲ್ ಯಂಗ್ ಮೆನ್ಸ್ ಅಸೋಸಿಯೇಶನ್ ಮೊಂಟೆಪದವು ವತಿಯಿಂದ ಕಿಟ್ ವಿತರಣೆ

ಮೊಂಟೆಪದವು, ಜೂ. 3. ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಜನಜೀವನ ಅಸ್ತವ್ಯಸ್ತವಾಗಿದೆ. ತವಸ್ಸುಲ್ ಸಂಘಟನೆ ವತಿಯಿಂದ ಮೊಂಟೆಪದವಿನ ಆಯ್ದ ಅರ್ಹ ಕುಟುಂಬಗಳನ್ನು ಗುರುತಿಸಿ ತರಕಾರಿ ಹಾಗೂ ದವಸಧಾನ್ಯ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಿದರು.
ಈ ಸಂದರ್ಭ ಸಮಿತಿಯ ಅಧ್ಯಕ್ಷರಾದ ನೌಷಾದ್ ಗುದುರು ಸಂಘಟನೆಯ ಪದಾಧಿಕಾರಿಗಳಾದ ರಝಾಕ್ ಮೊಂಟೆಪದವು, ತೌಸೀಫ್ ಗುದುರು, ರಹೀಮ್ ಮೊಂಟೆಪದವು, ಅಬ್ಬಾಸ್ ಐಎಂ, ಹನೀಫ್ ಕೂಯಾ, ಕರೀಮ್ ಗುದುರು ಹಾಗೂ ಸಂಘಟನೆಯ ಗಲ್ಪ್ ಸಮಿತಿಯ ಕನ್ವೀನರ್ ರಿಮಿಯಾಝ್ ಸಾಮಣಿಗೆ ಮತ್ತು ಸ್ಥಳೀಯರಾದ ರಶೀದ್ ಮಲಾರ್ ಹಾಗೂ ರಫೀಕ್ ವನದಡಿ ಉಪಸ್ಥಿತರಿದ್ದರು.










