ಎನ್ಜಿಒ ಸ್ಥಾಪಿಸಿದ್ದ ತಾತ್ಕಾಲಿಕ ಆಮ್ಲಜನಕ ಸೌಲಭ್ಯವನ್ನು ಧ್ವಂಸಗೊಳಿಸಿದ ಗೂಂಡಾಗಳು

photo: twitter
ಹೊಸದಿಲ್ಲಿ: ಆಮ್ಲಜನಕದ ಅಗತ್ಯವಿರುವ ಕೋವಿಡ್ ರೋಗಿಗಳಿಗೆ ಸಹಾಯ ಮಾಡಲು ಹರ್ಯಾಣದ ಗುರುಗ್ರಾಮದಲ್ಲಿ ಸ್ಥಾಪಿಸಲಾದ ಎನ್ಜಿಒ ಹೇಮ್ ಕುಂಟ್ ಫೌಂಡೇಶನ್ನ ತಾತ್ಕಾಲಿಕ ಸೌಲಭ್ಯವನ್ನು ಗುರುವಾರ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿ ಕಿತ್ತುಹಾಕಿದ್ದಾರೆ.
ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ದಿಲ್ಲಿ ಹಾಗೂ ಅದರ ಹತ್ತಿರದ ಪ್ರದೇಶಗಳಲ್ಲಿನ ಜನರು ಆಮ್ಲಜನಕಕ್ಕಾಗಿ ಪರದಾಟ ನಡೆಸುತ್ತಿದ್ದಾಗ ಎನ್ ಜಿ ಒ ಸ್ಥಾಪಿಸಿರುವ ಈ ವ್ಯವಸ್ಥೆಯಿಂದ ಅನೇಕರಿಗೆ ಸಹಾಯವಾಗಿತ್ತು.
ಗುರುಗ್ರಾಮ ಸೆಕ್ಟರ್ 61 ರಲ್ಲಿ ಕೇಂದ್ರದಲ್ಲಿ ದಾಳಿ ನಡೆದಾಗ ಯಾವುದೇ ರೋಗಿಗಳು ಇರಲಿಲ್ಲ, ಆದರೂ ಜನರು ನಿರಂತರವಾಗಿ ಆಮ್ಲಜನಕ ಸಿಲಿಂಡರ್ಗಳನ್ನು ತುಂಬಿಸಿಕೊಳ್ಳಲು ಬರುತ್ತಿದ್ದರು.
ಗುರುವಾರ ಬೆಳಿಗ್ಗೆ 6 ಅಥವಾ 7 ರ ಸುಮಾರಿಗೆ ದಾಳಿ ಪ್ರಾರಂಭವಾಯಿತು, ದಾಳಿಕೋರರು ಮೊದಲು ಸೌಲಭ್ಯದ ಜನರೇಟರ್ಗಳನ್ನು ತೆಗೆದುಕೊಂಡು ಅದರ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾರೆ ಎಂದು ಫೌಂಡೇಶನ್ ಅಧಿಕಾರಿಗಳು ತಿಳಿಸಿದ್ದಾರೆ.
Next Story





