ಪತಿಯಿಂದ ಕಿರುಕುಳ ಆರೋಪ: ಬೆಂಕಿ ಹಚ್ಚಿಕೊಂಡು ಆಯುಷ್ ಇಲಾಖೆಯ ಸ್ಟಾಫ್ ನರ್ಸ್ ಆತ್ಮಹತ್ಯೆ

ಕಲಬುರಗಿ, ಜೂ.4: ಆಯುಷ್ ಇಲಾಖೆಯ ಸ್ಟಾಫ್ ನರ್ಸ್ ಒಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಕಲಬುರಗಿ ನಗರದ ಶಿವಾಜಿನಗರದಲ್ಲಿ ನಡಿದಿದೆ.
ಮೃತರನ್ನು ಇಂದಿರಾ(38) ಎಂದು ಗುರುತಿಸಲಾಗಿದೆ. ಇವರು ಸೇಡಂನಲ್ಲಿ ಆಯುಷ್ ಇಲಾಖೆಯ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಲಬುರಗಿ ನಗರದ ಶಿವಾಜಿ ನಗರದಲ್ಲಿ ಗುರುವಾರ ತಡರಾತ್ರಿ ಘಟನೆ ನಡೆದಿದೆ.
ಮೃತ ಇಂದಿರಾ ಅವರಿಗೆ ಗಂಡ ಸಂಜೀವ್ ರೆಡ್ಡಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ. ಹೀಗಾಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಇಂದಿರಾ ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಯಚೂರು ಮೂಲದ ಇಂದಿರಾ ಅವರನ್ನು 2002ರಲ್ಲಿ ಸಂಜೀವ್ ರೆಡ್ಡಿ ಎಂಬವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಸಿವಿಲ್ ಕಾಂಟ್ರಾಕ್ಟರ್ ಆಗಿದ್ದ ಸಂಜೀವ್ ರೆಡ್ಡಿ ಹಣಕ್ಕಾಗಿ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದರು ಎಂಬ ಆರೋಪಿಸಲಾಗಿದೆ.
ಈ ಸಂಬಂಧ ಕಲಬುರಗಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





