ಜೂ.5: ವಿಶ್ವ ಪರಿಸರ ದಿನಾಚರಣೆ; ಬಿವಿಟಿಯಿಂದ ಅಂತರ್ಜಾಲ ಜಾಗೃತಿ
ಮಣಿಪಾಲ, ಜೂ.4: ವಿಶ್ವ ಪರಿಸರ ದಿನದ ಅಂಗವಾಗಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಅಂತರ್ಜಾಲ ಜಾಗೃತಿ ಕಾರ್ಯಕ್ರವೊಂದನ್ನು ಆಯೋಜಿಸಿದೆ.
ಶನಿವಾರ ಅಪರಾಹ್ನ 3 ರಿಂದ 4:30ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ನಿತ್ಯ ಜೀವನಲ್ಲಿ ಕನಿಷ್ಠ ಪ್ಲಾಸ್ಟಿಕ್ ಬಳಕೆ ಮತ್ತು ಪರಿಸರ ಸ್ನೇಹಿ ನಿತ್ಯೋಪಯೋಗಿ ವಸ್ತುಗಳ ತಯಾರಿಕೆ ಎಂಬ ವಿಚಾರದಲ್ಲಿ ಬೆಂಗಳೂರಿನ ಪರಿಸರ ತಜ್ಞೆ ಚೈತನ್ಯ ಸುಬ್ರಮಣ್ಯ ಮಾಹಿತಿ ನೀಡಲಿದ್ದಾರೆ.
ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದ್ದಳಿಕೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಉಮಾ ಗೌಡ ಅವರು ತಮ್ಮ ಗ್ರಾಮದಲ್ಲಿ ಕಸ ನಿರ್ವಹಣೆ, ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಭಾರತೀಯ ವಿಕಾಸ ಟ್ರಸ್ಟ್‌ನಿಂದ ನಡೆದಿರುವ ಕಾರ್ಯಕ್ರಮಗಳ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ
ಈ ಕಾರ್ಯಕ್ರಮ ಗೂಗಲ್ ಮೀಟ್‌ನಲ್ಲಿ ನಡೆಯಲಿದ್ದು ಆಸಕ್ತರು - http://meet.google.com/qmo-jpui-qmj- ಈ ಲಿಂಕ್ ಮೂಲಕ ಕಾರ್ಯಕ್ರಮ ದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
Next Story





