ದೈವ ಪರಿಚಾರಕರಿಗೆ ಪ್ಯಾಕೇಜ್‌ಗೆ ಆಗ್ರಹ
ಉಡುಪಿ, ಜೂ.4: ತುಳುನಾಡಿನ ದೈವ ಪರಿಚಾರಕರಿಗೆ, ದರ್ಶನ ಪಾತ್ರಿಗಳಿಗೆ, ಪಂಬದರಿಗೆ, ನಲಿಕೆಯವರಿಗೆ ಸರಕಾರದ ಕೋವಿಡ್ ವಿಶೇಷ ಪ್ಯಾಕೇಜ್ನಲ್ಲಿ ಯಾವುದೇ ಮನ್ನಣೆ ನೀಡದಿರುವುದು ಬೇಸರ ಮೂಡಿಸಿದೆ ಎಂದು ಬಿಜೆಪಿ ಮಾಜಿ ಉಡುಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ತಿಳಿಸಿದ್ದಾರೆ.
ಕಲಾವಿದರಿಗೆ, ಮುಜುರಾಯಿ ಇಲಾಖೆಯ ದೇವಾಲಯದ ಅರ್ಚಕರಿಗೆ ವಿಶೇಷ ಪ್ಯಾಕೇಜ್ ನೀಡುದ್ದು, ದೈವರಾಧಕರನ್ನು ಕಡೆಗಣಿಸಲಾಗಿದೆ. ಸರಕಾರ ತುಳುನಾಡಿನ ಧಾರ್ಮಿಕ ಪರಂಪರೆಯ ದೈವಾರಾಧಕ ಕುಟುಂಬಗಳಿಗೆ ತಲಾ 10 ಸಾವಿರ ರೂ ಆರ್ಥಿಕ ನೆರವು ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Next Story





