ಕಾರ್ಕಳ : ಕುಸಿದು ಬಿದ್ದು ಮಹಿಳೆ ಮೃತ್ಯು
ಕಾರ್ಕಳ : ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಾರ್ಕಳ ಮೂರು ಮಾರ್ಗ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಮಹಿಳೆಯ ಬಳಿಯಿದ್ದ ಪ್ಲಾಸ್ಟಿಕ್ ಕವರ್‌ನಲ್ಲಿ ಬಯ್ಯ, ಪಾಲಡ್ಕ, ಮಂಗಳೂರು ತಾಲೂಕು ಎಂದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾರ್ಕಳ ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಮಾಜಿ ಸದಸ್ಯ ಪ್ರಕಾಶ್ ರಾವ್, ಕೆ.ಬಿ. ಕೀರ್ತನ್ ಕುಮಾರ್, ಸಂತೋಷ್ ರಾವ್, ಸ್ವಚ್ಛ ಬ್ರಿಗೇಡ್ ಸದಸ್ಯರಾದ ರಾಜೇಂದ್ರ, ಪ್ರಸನ್ನ ಮತ್ತಿತರರು ಮಹಿಳೆಯ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಿ, ಪೊಲೀಸರಿಗೆ ಮಾಹಿತಿ ನೀಡಿದರು.
Next Story





