ಕಾಪು : ಮಳೆಗೆ 2.45 ಲಕ್ಷ ರೂ. ನಷ್ಟ
ಕಾಪು : ಕಾಪು ತಾಲ್ಲೂಕಿನಲ್ಲಿ ಗುರುವಾರ ರಾತ್ರಿಯಿಂದ ಸುರಿದ ಭಾರೀ ಮಳೆ ಉಂಟಾಗಿದ್ದು, ಸುಮಾರು ಒಟ್ಟು ಸುಮಾರು 2.45 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಕಾಪು ತಾಲ್ಲೂಕಿನ ಕಟಪಾಡಿ, ಶಿರ್ವ, ಕಾಪು, ಪಡುಬಿದ್ರಿ ಪರಿಸರದಲ್ಲಿ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದ ವರೆಗೆ ಭಾರೀ ಮಳೆ ಉಂಟಾಗಿದೆ. ಕೆಲವಡೆ ಸಿಡಿಲು ಬಡಿದು ಹಲವಡೆ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಸಿಡಿಲು ಬಡಿತದಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ನಷ್ಟ: ಬೆಳ್ಳೆ ಸೆಲ್ವಿರವರ ಮನೆಗೆ ಸಿಡಿಲು ಬಡಿದು 50ಸಾವಿರ ರೂ., ಮಟ್ಟು ಗ್ರಾಮದ ಗೋಪಾಲರವರ ಮನೆಗೆ ಸಿಡಿಲು ಬಡಿದು 25ಸಾವಿರ ರೂ., ಕುರ್ಕಾಲು ಗ್ರಾಮದ ಗೋಪಾಲಕೃಷ್ಣ ಭಟ್ಟ ಸಿಡಿಲು ಬಡಿದು ವಯರಿಂಗ್ ಮೀಟರ್ ಬೋರ್ಡಿಗೆ ಹಾನಿಯಾಗಿದ್ದು, 50ಸಾವಿರ ರೂ. ನಷ್ಟ ಉಂಟಾಗಿದೆ.
ಕುರ್ಕಾಲು ಗ್ರಾಮದ ಸುಮತಿ ಇವರ ಮನೆಗೆ ಸಿಡಿಲು ಬಡಿದು ಎಲೆಕ್ಟ್ರಾನಿಕ್ ಉಪಕರಣಕ್ಕೆ ಹಾನಿಯಾಗಿ 30ಸಾವಿರ ರೂ., ಕುರ್ಕಾಲು ಗ್ರಾಮದ ಸುಪ್ರೀತ್ ತಂತ್ರಿ ಇವರ ಮನೆಯ ಆವರಣ ಗೋಡೆ ಮನೆಯಿಂದ ಹಾನಿಯಾಗಿ 10 ಸಾವಿರ ರೂ., ಕುರ್ಕಾಲು ಗ್ರಾಮದ ಸುಬ್ರಾಯ ಆಚಾರ್ಯ ಇವರ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿ 80ಸಾವಿರ ರೂ. ನಷ್ಟ ಉಂಟಾಗಿದೆ. ಒಟ್ಟು ಸುಮಾರು 2.45 ಲಕ್ಷ ರೂ. ನಷ್ಟ ಉಂಟಾಗಿದೆ.





