ಸಿಬಿಎಸ್‌ಇ 12ನೇ ತರಗತಿ: ಮೌಲ್ಯಮಾಪನಕ್ಕೆ ಮಾನದಂಡಗಳನ್ನು ರೂಪಿಸಲು ಸಮಿತಿ ರಚನೆ

ಹೊಸದಿಲ್ಲಿ,ಜೂ.4: ಪರೀಕ್ಷೆಗಳು ರದ್ದುಗೊಂಡಿರುವ ಹಿನ್ನೆಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ವಸ್ತುನಿಷ್ಠ ಮಾನದಂಡಗಳನ್ನು ರೂಪಿಸಲು 13 ಸದಸ್ಯರ ಸಮಿತಿಯೊಂದನ್ನು ಸಿಬಿಎಸ್‌ಇ ಶುಕ್ರವಾರ ರಚಿಸಿದೆ.
ಸಮಿತಿಯು 10 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ.
ಕೋವಿಡ್‌ನಿಂದಾಗಿ ಉಂಟಾಗಿರುವ ಅನಿಶ್ಚಿತತೆ ಮತ್ತು ವಿವಿಧ ಪಾಲುದಾರರಿಂದ ಮರುಮಾಹಿತಿಗಳ ಆಧಾರದಲ್ಲಿ ಈ ವರ್ಷ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, ಕಾಲಮಿತಿಯಲ್ಲಿ ಸುಸ್ಪಷ್ಟ ವಸ್ತುನಿಷ್ಠ ಮಾನದಂಡಗಳ ಆಧಾರದಲ್ಲಿ ಫಲಿತಾಂಶಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ ಭಾರದ್ವಾಜ ತಿಳಿಸಿದರು.
Next Story





