ಜಾಗತಿಕ ಆಹಾರ ಧಾನ್ಯಗಳ ಬೆಲೆ ಕ್ಷಿಪ್ರ ವೇಗದಲ್ಲಿ ಏರಿಕೆ: ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ

ರೋಮ್ (ಇಟಲಿ), ಜೂ. 4: ಜಾಗತಿಕ ಆಹಾರ ಉತ್ಪನ್ನಗಳ ಬೆಲೆ ಮೇ ತಿಂಗಳಲ್ಲಿ ದಶಕಕ್ಕೂ ಹೆಚ್ಚಿನ ಅವಧಿಯಲ್ಲೇ ಗರಿಷ್ಠ ದರದಲ್ಲಿ ಏರಿದೆ, ಆದರೆ ಅದೇ ವೇಳೆ, ಜಾಗತಿಕ ದವಸ ಧಾನ್ಯಗಳ ಉತ್ಪಾದನೆಯು ಹೊಸ ದಾಖಲೆಯೊಂದನ್ನು ನಿರ್ಮಿಸುವ ಹಂತದಲ್ಲಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ಗುರುವಾರ ಹೇಳಿದೆ.
ಎಫ್‌ಎಒನ ಆಹಾರ ಬೆಲೆ ಸೂಚ್ಯಂಕವು ಮೇ ತಿಂಗಳಲ್ಲಿ 127.1 ಅಂಶಗಳಾಗಿತ್ತು. ಇದು ಎಪ್ರಿಲ್‌ಗಿಂತ 4.8 ಶೇಕಡ ಮತ್ತು 2020ರ ಮೇ ತಿಂಗಳಿಗಿಂತ 39.7 ಶೇಕಡದಷ್ಟು ಅಧಿಕವಾಗಿದೆ.
ಖಾದ್ಯ ತೈಲಗಳು, ಸಕ್ಕರೆ ಮತ್ತು ದವಸ ಧಾನ್ಯಗಳ ಅಂತರ್‌ರಾಷ್ಟ್ರೀಯ ಬೆಲೆಗಳಲ್ಲಿ ಆಗಿರುವ ಭಾರೀ ಏರಿಕೆಯು ಎಫ್‌ಎಒನ ಆಹಾರ ಬೆಲೆ ಸೂಚ್ಯಂಕದ ಏರಿಕೆಗೆ ಕಾರಣವಾಗಿದೆ. ಈ ಏರಿಕೆಯು 2011 ಸೆಪ್ಟಂಬರ್ ಬಳಿಕದ ಗರಿಷ್ಠ ಏರಿಕೆಯಾಗಿದೆ. ಅದೂ ಅಲ್ಲದೆ, ಈ ಬೆಲೆ ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ ಏರಿಕೆಗಿಂತ ಕೇವಲ 7.6 ಶೇಕಡ ಕಡಿಮಯಾಗಿದೆ.
Next Story