ವಿಶ್ವ ಪರಿಸರ ದಿನ: ಎಸ್ಸೆಸ್ಸೆಫ್ ನಿಂದ 'ಉಸಿರಿಗಾಗಿ ಹಸಿರು' ಅಭಿಯಾನ

ಮಂಗಳೂರು : ವಿಶ್ವ ಪರಿಸರ ದಿನ ಅಂಗವಾಗಿ ಎಸ್ಸೆಸ್ಸೆಫ್ ನಿಂದ 'ಉಸಿರಿಗಾಗಿ ಹಸಿರು' ಅಭಿಯಾನ ಕಾರ್ಯಕ್ರಮ ಜೂ.5ರಂದು ನಡೆಯಲಿದೆ.
ಪ್ರಕೃತಿ, ಪರಿಸರ-ಮರಗಿಡಗಳು ಉಳಿಯಬೇಕಾದ ಅನಿವಾರ್ಯತೆ ಕುರಿತು ಅರಿವು ಮೂಡಿಸಲು ವಿಶ್ವ ಪರಿಸರ ದಿನದಂದು ಕನಿಷ್ಠ ಒಂದು ಗಿಡವನ್ನಾದರೂ ನೆಡುವ ಮೂಲಕ ಉಸಿರಿಗಾಗಿ ಹಸಿರು ಎಂಬ ಕಾರ್ಯಕ್ರಮ ನಡೆಯಲಿದೆ. ಆ ಪ್ರಯುಕ್ತ ಎಸ್ಸೆಸ್ಸೆಫ್ ಸಾವಿರಾರು ಯುನಿಟ್ ಗಳ ಕಾರ್ಯಕರ್ತರು ಮನೆಯಂಗಳದಲ್ಲಿ ಗಿಡಗಳನ್ನು ನೆಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





