ಲಸಿಕೆ ನೋಂದಣಿಗೆ ಸಹಾಯ ಮಾಡಲು ಕಾಂಗ್ರೆಸ್ ಕಮಿಟಿ ರಚನೆ

ಮಂಗಳೂರು, ಜೂ.5: ದ.ಕ. ಕಾಂಗ್ರೆಸ್ ಕೋವಿಡ್ ಹೆಲ್ಪ್‌ಲೈನ್ ಸಭೆಯು ಸಂಚಾಲಕ ಐವನ್ ಡಿಸೋಜರ ನೇತೃತ್ವದಲ್ಲಿ ಶನಿವಾರ ಜರುಗಿತು. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಘೋಷಿಸಿದ 500 ಕೋ.ರೂ.ನ ಪ್ಯಾಕೇಜ್ ತೀರಾ ಅಲ್ಪವಾಗಿದ್ದು, ಅದನ್ನು ಕನಿಷ್ಠ 5000 ಕೋ.ರೂ.ಗೆ ಏರಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿ ಸಲಾಯಿತು.
ಲಸಿಕೆಗಾಗಿ ನೋಂದಣಿ ಮಾಡಲು ಸಾಧ್ಯವಿಲ್ಲದವರಿಗೆ ಸಹಾಯ ಮಾಡಲು ಪ್ರತಿಯೊಂದು ಲಸಿಕಾ ಕೇಂದ್ರಗಳಲ್ಲಿ ಕೋವಿಡ್ ಹೆಲ್ಪ್‌ಲೈನ್ ಕಾರ್ಯಕರ್ತರನ್ನು ಒಳಗೊಂಡ ಕಾಂಗ್ರೆಸ್ ಕಮಿಟಿ ರಚಿಸಲಾಯಿತು.
ಬಂದರ್-ಆರಿಫ್ ಬಾವ, ಕುದ್ರೋಳಿ-ಯೂಸೂಫ್ ಮತ್ತು ಇಮ್ರಾನ್, ಬೆಂಗ್ರೆ-ಚೇತನ್ ಬೆಂಗ್ರೆ ಮತ್ತು ಫಯಾಝ್, ಬಿಜೈ-ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಡಿ.ಕೆ.ಅಶೋಕ್, ಕುಂಜತ್ತ್ ಬೈಲ್-ಮುಹಮ್ಮದ್ ಕುಂಜತ್ತ್‌ಬೈಲ್, ರೆಹಮಾನ್, ಕಣ್ಣೂರು-ಹಬೀಬುಲ್ಲಾ, ಶೋಭಾ ಕೇಶವ, ಜಪ್ಪು-ಹೊನ್ನಯ್ಯ, ದುರ್ಗಾಪ್ರಸಾದ್, ತೆರೆಝಾ ಪಿಂಟೊ, ಪಾಂಡೇಶ್ವರ-ಭಾಸ್ಕರ್ ರಾವ್, ಸಲೀಂ ಮುಕ್ಕ, ಹಸನ್ ಡೀಲ್ಸ್, ಸುಧಾಕರ್ ಶೆಣೈ ಅವರಿಗೆ ಜವಾಬ್ದಾರಿ ವಹಿಸಲಾಯಿತು.
ಸಭೆಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ನವೀನ್ ಡಿಸೋಜ, ವಿವೇಕ್ ರಾಜ್ ಪೂಜಾರಿ, ಮುಹಮ್ಮದ್ ಕುಂಜತ್ತ್‌ಬೈಲ್, ಅಶೋಕ್ ಡಿ.ಕೆ., ಭಾಸ್ಕರ್ ರಾವ್, ಅಶಿತ್ ಪಿರೇರಾ, ಶಾಹುಲ್ ಹಮೀದ್, ಚಿತ್ತರಂಜನ್ ಶೆಟ್ಟಿ, ದೀಕ್ಷಿತ್ ಅತ್ತಾವರ, ಸತೀಶ್ ಪೆಂಗಲ್, ತೆರೆಝಾ ಪಿಂಟೋ, ದುರ್ಗಾ ಪ್ರಸಾದ್, ಹೊನ್ನಯ್ಯ, ಇಮ್ರಾನ್, ಯೂಸೂಫ್ ಉಚ್ಛಿಲ್, ಸಲೀಂ ಮುಕ್ಕ, ಹಸನ್ ಡೀಲ್ಸ್, ಮಹೇಶ್ ಕೋಡಿಕಲ್, ಬಾಝಿಲ್, ಯೋಗಿಶ್ ನಾಯ್ಕ್, ವೀಣಾ, ಆನಂದ್ ಸೋನ್ಸ್, ಜೇಮ್ಸ್ ಪ್ರವೀಣ್, ಹಬೀಬುಲ್ಲಾ ಕಣ್ಣೂರು ಉಪಸ್ಥಿತರಿದ್ದರು.







