ಜಪ್ಪಿನಮೊಗರು: ಉಚಿತ ಅಕ್ಕಿ ವಿತರಣೆ

ಮಂಗಳೂರು, ಜೂ.5: ಮೋಕ್ಷ ನಿಧಿ ಜಪ್ಪಿನಮೊಗರು, ಜಪ್ಪಿನಮೊಗರು ಗ್ರಾಮ ಯುವಕ ಮಂಡಲ(ರಿ), ಡಿವೈಎಫ್‌ಐ ಜಪ್ಪಿನಮೊಗರು ಘಟಕದ ನೇತೃತ್ವದಲ್ಲಿ ಹಾಗೂ ವೈಎಸ್‌ಎಂ ಅಂತರರಾಷ್ಟ್ರೀಯ ಸಂಸ್ಥೆ ಮಂಗಳೂರು ಇದರ ಸಹಕಾರದಲ್ಲಿ ಜಪ್ಪಿನಮೊಗರುವಿನಲ್ಲಿರುವ ಯುವಕ ಮಂಡಲದ ಕಚೇರಿಯಲ್ಲಿ ಇತ್ತೀಚೆಗೆ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮ ನಡೆಯಿತು.
ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಅಧ್ಯಕ್ಷ ಹನೀಫ್ ಜೆ., ಡಿವೈಎಫ್‌ಐ ಮುಖಂಡರಾದ ಅಭಿಷೇಕ್, ಶಿವಾನ್ ಅಮೀನ್, ಉದಯಚಂದ್ರ ರೈ. ಸಂತೋಷ್ ಕುಮಾರ್ ಬಜಾಲ್, ಕಟ್ಟಡ ನಿರ್ಮಾಣ ಸಂಘದ ಅಧ್ಯಕ್ಷ ಮನೋಜ್ ಪೂಜಾರಿ, ಗೌರವಾಧ್ಯಕ್ಷ ನವೀನ್ ಕಾರ್ಪೆಂಟರ್, ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಸೀತರಾಮ ಶೆಟ್ಟಿ, ಚಂದ್ರಹಾಸ್ ಕುಲಾಲ್, ಮನೋಜ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಜಯಂತಿ ಬಿ. ಶೆಟ್ಟಿ, ಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
Next Story





