ದ.ಕ. ಜಿಲ್ಲೆಯ ಪ್ರಥಮ ಆಮ್ಲಜನಕ ತಯಾರಿಕಾ ಘಟಕ ಲೋಕಾರ್ಪಣೆ
ಬಂಟ್ವಾಳ ತಾಲೂಕಿನ ವಾಮದಪದವು ಆರೋಗ್ಯ ಕೇಂದ್ರ

ಮಂಗಳೂರು, ಜೂ.5: ಬಂಟ್ವಾಳ ತಾಲೂಕಿನ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಲಾದ ದ.ಕ. ಜಿಲ್ಲೆಯ ಪ್ರಪ್ರಥಮ ಆಮ್ಲಜನಕ ತಯಾರಿಕಾ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪುಜಾರಿ ಶನಿವಾರ ಲೋಕಾರ್ಪಣೆಗೈದರು.
ಬಳಿಕ ಮಾತನಾಡಿದ ಅವರು ವಾಮದಪದವು ಸಮುದಾಯ ಆರೋಗ್ಯ ಕೇಂದ್ರವು 30 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯಾಗಿದೆ. ಈ ಆಮ್ಲಜನಕ ತಯಾರಿಕಾ ಘಟಕವನ್ನು ಮಹಾರಾಷ್ಟ್ರದ ಅಮ್ರಿಕೇರ್ ಇಂಡಿಯಾ ಫೌಂಡೇಶನ್ ಕೊಡುಗೆಯಾಗಿ ನೀಡಿದೆ. ಈ ಆಮ್ಲಜನಕ ಘಟಕವು 500 ಲೀ.ಸಾಮರ್ಥ್ಯ ಹೊಂದಿದ್ದು, ಪ್ರತೀ ನಿಮಿಷಕ್ಕೆ 47 ಎಲ್‌ಪಿಎಂ ಆಮ್ಲಜನಕ ತಯಾರಿಕಾ ಸಾಮರ್ಥ್ಯ ಹೊಂದಿರುತ್ತದೆ. ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ಅಗತ್ಯವಿರುವ ಆಮ್ಲಜನಕದ ಬೇಡಿಕೆಯನ್ನು ಪೂರೈಸಲು ಇದು ಸಶಕ್ತವಾಗಿದೆ ಎಂದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.

Next Story





