ಸೌದಿ ಅರೇಬಿಯಾದ ನಿರ್ಧಾರ ಅವಲಂಬಿಸಿ ಈ ವರ್ಷ ಹಜ್ ಯಾತ್ರೆ: ಕೇಂದ್ರ ಸಚಿವ ನಖ್ವಿ

ಹೊಸದಿಲ್ಲಿ, ಜೂ. 4: ಈ ವರ್ಷ ವಾರ್ಷಿಕ ಹಜ್ ಯಾತ್ರೆ ಸಾಧ್ಯವಿದೆಯೇ ಇಲ್ಲವೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈ ಬಗೆಗಿನ ನಿರ್ಧಾರ ಸೌದಿ ಅರೇಬಿಯಾ ಸರಕಾರವನ್ನು ಅವಲಂಬಿಸಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಶನಿವಾರ ಹೇಳಿದ್ದಾರೆ.
ಸೌದಿ ಅರೇಬಿಯಾ ಸರಕಾರದ ನಿರ್ಧಾರದೊಂದಿಗೆ ಭಾರತ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ ಎಂದು ನಕ್ವಿ ತಿಳಿಸಿದ್ದಾರೆ. ‘‘ಹಜ್ ಯಾತ್ರೆ ಸೌದಿ ಅರೇಬಿಯಾದ ನಿರ್ಧಾರವನ್ನು ಅವಲಂಬಿಸಿದೆ. ಸೌದಿ ಅರೇಬಿಯಾದ ನಿರ್ಧಾರದೊಂದಿಗೆ ಭಾರತ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಕಳೆದ ವರ್ಷ ಹಜ್ ಯಾತ್ರೆ ರದ್ದುಗೊಳಿಸಲಾಗಿತ್ತು. ಈ ವರ್ಷ ಇದುವರೆಗೆ ಏನನ್ನೂ ನಿರ್ಧರಿಸಿಲ್ಲ’’ ಎಂದು ನಖ್ವಿ ಹೇಳಿದ್ದಾರೆ.
Next Story





