ವಂಚನೆ ಆರೋಪ: ಕೋವಿಡ್ ರೋಗಿಯ ಆರೈಕೆ ಮಾಡುತ್ತಿದ್ದ ಯುವಕನ ವಿರುದ್ಧ ದೂರು
ಮಂಗಳೂರು, ಜೂ.5: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ರೋಗಿಯೊಬ್ಬರ ಆರೈಕೆಗೆ ಬಂದಿದ್ದ ಯುವಕನೊಬ್ಬ 3.77ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಕಂಕನಾಡಿ ನಗರ ಠಾಣೆಗೆ ದೂರು ನೀಡಲಾಗಿದೆ.
ಕೇರಳ ಮೂಲದ ಮಲಪ್ಪುರಂ ನಿವಾಸಿ ಫೈಜಿ (21) ಪ್ರಕರಣದ ಆರೋಪಿ. ವಿವಿನ್ ಸಿಕ್ವೇರಾ ಎಂಬವರು ಕೋವಿಡ್ ಸೋಂಕಿಗೊಳಗಾಗಿ ಎ.28ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೈಕೆಗೆ ಎ.30ರಂದು ಆಶಾ ಹೋಮ್ ನರ್ಸಸ್ ಸಂಸ್ಥೆಯ ಸಿಬ್ಬಂದಿ ಫೈಜಿಯನ್ನು ನೇಮಕ ಮಾಡಲಾಗಿತ್ತು. ಈತ ಆರೈಕೆ ಮಾಡುವುದರೊಂದಿಗೆ ವಿವಿನ್ ಸಿಕ್ವೇರಾ ಅವರ ಡೆಬಿಟ್ ಕಾರ್ಡ್‌ನ ಪಿನ್ ನಂಬರ್ ಪಡೆದಿದ್ದ. ಮೇ 18ರಂದು ವಿವಿನ್ ಸಿಕ್ವೇರಾ ಮೃತಪಟ್ಟಿದ್ದರು.
ಆರೋಪಿಯು ಮೇ 1ರಿಂದ 26ರವರೆಗೆ ಹಂತಹಂತವಾಗಿ 3.77 ಲಕ್ಷ ರೂ. ಡ್ರಾ ಮಾಡಿ ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





