ಪರೀಕ್ಷೆ ರದ್ದುಪಡಿಸಿದ್ದಕ್ಕಾಗಿ ಪ್ರಧಾನಿಗೆ ಟ್ವಿಟರ್ ನಲ್ಲಿ ಥ್ಯಾಂಕ್ಸ್ ಹೇಳುವಂತೆ 'ಟೂಲ್ ಕಿಟ್ʼ ರಚನೆ: ಆರೋಪ

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಈ ವರ್ಷ ನಡೆಸಲುದ್ದೇಶಿಸಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುವಂತೆ ವಿದ್ಯಾರ್ಥಿಗಳೊಂದಿಗೆ ವೀಡಿಯೋ ಮಾಡಿ ಟ್ವಿಟರ್ ನಲ್ಲಿ ಪ್ರಕಟಿಸುವಂತೆ ಟೂಲ್ ಕಿಟ್ ರಚನೆ ಮಾಡಲಾಗಿದೆ ಎಂದು altnews ಸಹಸ್ಥಾಪಕ ಪ್ರತೀಕ್ ಸಿನ್ಹ ತಮ್ಮ ಟ್ವಿಟರ್ ಖಾತೆಯಲ್ಲಿ ಆರೋಪಿಸಿದ್ದಾರೆ.
ಎಲ್ಲ ಕೇಂದ್ರೀಯ ವಿದ್ಯಾಲಯಗಳಿಗೆ ಈ ಕುರಿತಾದಂತೆ ಸಂದೇಶಗಳನ್ನು ರವಾನಿಸಲಾಗಿದ್ದು, ಪ್ರತಿಯೊಂದು ಟ್ವೀಟ್ ನಲ್ಲೂ ಒಂದೇ ರೀತಿಯ ವಿವರಗಳನ್ನು ಭರ್ತಿ ಮಾಡುವಂತೆ ಸೂಚಿಸಲಾಗಿದೆ. ಒಂದು ಶಾಲೆಯಿಂದ ಕನಿಷ್ಠ 5 ಮಂದಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳುವಂತೆ ವೀಡಿಯೋ ಮಾಡಿ ಅಪ್ಲೋಡ್ ಮಾಡುವಂತೆ ಸೂಚಿಸಿದ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
ವಿದ್ಯಾರ್ಥಿಗಳ ಹೆಸರು, ಕೇಂದ್ರೀಯ ವಿದ್ಯಾಲಯದ ಊರು, ಪ್ರಧಾನಿ ಮೋದಿಗೆ ಧನ್ಯವಾದ ಸಮರ್ಪಣೆ ಮತ್ತು ಪ್ರಧಾನಿಯನ್ನು ಟ್ಯಾಗ್ ಮಾಡುವಂತೆ ಸೂಚಿಸಲಾಗಿದೆ ಎಂದು ಟ್ವೀಟ್ ನಲ್ಲಿ ಸಿನ್ಹ ಉಲ್ಲೇಖಿಸಿದ್ದಾರೆ. ʼದಯವಿಟ್ಟು ನೀವು ಮಕ್ಕಳನ್ನಾದರೂ ಬಿಟ್ಟುಬಿಡಿ ಮೋದೀಜಿ" ಎಂದು ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
"ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿದಿದ್ದರೂ ಸರಕಾರವೇಕೆ ಜನರ ಮಧ್ಯೆ ಅಪಮಾನಕ್ಕೀಡಾಗುತ್ತಿದೆ?" ಎಂದು ವ್ಯಕ್ತಿಯೋರ್ವರು ಪ್ರಶ್ನಿಸಿದ್ದಾರೆ.
The 'Modi' toolkit
— Pratik Sinha (@free_thinker) June 4, 2021
From Agra to Bangalore to Gomtinagar to Kollam to Sitapur.
Format:
1) Student Name
2) Name of KV + name of town/city.
3) "expressing his gratitude"/"expressing her gratitude" based on gender.
5) Tag or mention the PM
At least spare the children Mr Modi. pic.twitter.com/ozdkBBdFZ2
Jis tool kit ka screenshot yeh hai pic.twitter.com/7GWimITGp2
— RUBAI DUTTA 1 (@DuttaRubai1) June 4, 2021