ನೀರಿನೊಳಗೆ ಪ್ರದರ್ಶನ ಫಲಕ ಹಿಡಿದುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದ ಲಕ್ಷದ್ವೀಪದ ಜನತೆ

photo: indianlekhak
ಹೊಸದಿಲ್ಲಿ: ಅರೇಬಿಯನ್ ಸಮುದ್ರದಲ್ಲಿನ ದ್ವೀಪಗಳಿಗೆ ಯೋಜಿಸಲಾದ ವಿವಾದಾತ್ಮಕ ಹೊಸ ನಿಯಮಗಳನ್ನು ವಿರೋಧಿಸಿ ಸೋಮವಾರ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ 12 ಗಂಟೆಗಳ ಉಪವಾಸ ಸತ್ಯಾಗ್ರಹದ ಅಂಗವಾಗಿ ಲಕ್ಷದ್ವೀಪದ ನಿವಾಸಿಗಳು ತಮ್ಮ ಮನೆಗಳ ಹೊರಗೆ, ಕಡಲ ತೀರ, ಸಮುದ್ರದಡಿಯಲ್ಲಿ ಪ್ರದರ್ಶನ ಫಲಕಗಳನ್ನು ಪ್ರದರ್ಶಿಸುತ್ತಿದ್ದಾರೆ.
ಹೊಸ ನಿರ್ಧಾರಗಳ ವಿರುದ್ಧ ಲಕ್ಷದ್ವೀಪದ ನಿವಾಸಿಗಳು ತಮ್ಮ ಮನೆಗಳಲ್ಲಿ ಹಾಗೂ ಅಂಗಡಿಗಳಲ್ಲೂ ಪ್ರತಿಭಟನೆ ನಡೆಸಿದರು. ಹೊಸ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಲಕ್ಷದ್ವೀಪವನ್ನು ಮಾಲ್ಡೀವ್ಸ್ ನಂತಯೇ ಪ್ರಮುಖ ಪ್ರವಾಸಿ ಆಕರ್ಷಣೆ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುವುದಾಗಿ ಹೇಳಿದ್ದಾರೆ.
ಉದ್ದೇಶಿತ ‘ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ (2021)’ ದ್ವೀಪಗಳ ವಿಶಿಷ್ಟ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ನಾಶಪಡಿಸುತ್ತದೆ. ಈ ನಿಯಮಗಳು ತಮ್ಮ ಆಹಾರ ಪದ್ಧತಿಯನ್ನು ಗುರಿಯಾಗಿಸಿಕೊಳ್ಳುತ್ತವೆ ಎಂದು ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ಲಕ್ಷದ್ವೀಪದ ನಿವಾಸಿಗಳು ಭಾವಿಸಿದ್ದಾರೆ. ಆದ್ದರಿಂದ ಸರಕಾರವು ತರಲು ಉದ್ದೇಶಿಸಿರುವ ಬದಲಾವಣೆಗಳು ಸ್ಥಳೀಯ ಜನರನ್ನು ಕೆರಳಿಸಿದೆ. ಲಕ್ಷದ್ವೀಪದ ಜನರ ಪ್ರತಿಭಟನೆಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ.