ವಿದೇಶಕ್ಕೆ ತೆರಳುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ದೃಡೀಕರಣ ಪತ್ರ ಅಗತ್ಯವಿಲ್ಲ: ಉಡುಪಿ ಅಪರ ಜಿಲ್ಲಾಧಿಕಾರಿ
ಉಡುಪಿ, ಜೂ.7: ವ್ಯಾಸಂಗಕ್ಕೆ ವಿದೇಶಗಳಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವವರಿಗೆ ಲಸಿಕೆ ಪಡೆಯುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅನಕ್ಸರ್-3 ನೀಡಲಾಗುತ್ತಿದೆ.
ಆದರೆ ಹೊರದೇಶಕ್ಕೆ ಉದ್ಯೋಗ ನಿಮಿತ್ತ ಹೋಗುವವರಲ್ಲಿ 45 ವಷರ್ ಮೇಲ್ಪಟ್ಟವರು ಜಿಲ್ಲಾಧಿಕಾರಿ ಕಚೇರಿಗೆ ಅನಕ್ಸರ್‌ಗಾಗಿ ಬರುತ್ತಿದ್ದು, ಈ ವಯೋ ಮಾನದವರು ಅನಕ್ಸರ್-3ಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಾರದೆ, ನೇರವಾಗಿ ತಮ್ಮ ಸಮೀಪದ ಸರಕಾರಿ ಆಸ್ಪತ್ರೆ/ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕಾ ಕೇಂದ್ರಗಳಿಗೆ ತೆರಳಿ ತಮ್ಮ ಪಾಸ್‌ಪೋರ್ಟ್‌ನ್ನು ಗುರುತಿನ ಚೀಟಿ (ಐಡಿ ಕಾರ್ಡ್) ಆಗಿ ಬಳಸಿ ಲಸಿಕೆ ಪಡೆಯಬಹುದಾಗಿದೆ.
ಲಸಿಕೆ ಪಡೆಯುವ ಸಂದರ್ಭ ಕೋವಿನ್ ಪೋರ್ಟ್‌ನಲ್ಲಿ ಪಾಸ್‌ಪೋರ್ಟ್ ನ್ನು ಗುರುತಿನ ಚೀಟಿಯಾಗಿ ದಾಖಲು ಮಾಡಿಸುವಂತೆ ಹಾಗೂ ಲಸಿಕೆ ಪಡೆಯುವಲ್ಲಿ ಯಾವುದೇ ಗೊಂದಲಗಳಿದ್ದರೆ ದೂ.ಸಂ.0820-2574802 ಅಥವಾ 1077ನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





