ನಕಲಿ ಫೇಸ್‌ಬುಕ್ ಖಾತೆಯ ಬಗ್ಗೆ ಎಚ್ಚರಿಕೆ ವಹಿಸಲು ಕಮಿಷನರ್ ಶಶಿಕುಮಾರ್ ಮನವಿ

ಮಂಗಳೂರು, ಜೂ.7: ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್‌ರ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದೆ. ಈ ಬಗ್ಗೆ ಆಯುಕ್ತರು ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದು, ತನಿಖೆ ನಡೆಯುತ್ತಿದೆ.
ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿರುವ ಆಯುಕ್ತರು ‘ನಕಲಿ ಫೇಸ್‌ಬುಕ್ ಖಾತೆ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ನನ್ನ ಹೆಸರಿನಿಂದ ನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ಮೂಲ ಫೇಸ್‌ಬುಕ್ ಖಾತೆಯಲ್ಲಿ 4898 ಗೆಳೆಯರಿದ್ದಾರೆ. ಕಿಡಿಗೇಡಿಗಳು ತೆರೆದ ಖಾತೆಯಲ್ಲಿ ಕಡಿಮೆ ಜನರಿರುವುದನ್ನು ಸಾರ್ವಜನಿಕರು ಗಮನಿಸಬೇಕು. ಅನಧಿಕೃತ ಖಾತೆಯ ಮೂಲಕ ಅಥವಾ ಸಂದೇಶ ಬಳಸಿ ಏನೇ ಬಂದರೂ ಪ್ರತಿಕ್ರಿಯಿಸಿ ಮೋಸ ಹೋಗಬೇಡಿ. ಅದರಲ್ಲೂ ಹಣಕಾಸಿನ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಫೇಸ್‌ಬುಕ್ ಸಂದೇಶ ನಂಬದಿರಿ’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Next Story





