ಹಿರಿಯ ನಟ ದಿಲೀಪ್ ಕುಮಾರ್ ದೇಹ ಸ್ಥಿತಿ ಸ್ಥಿರ

ಮುಂಬೈ,ಜೂ.7: ಉಸಿರಾಟದ ಸಮಸ್ಯೆಯಿಂದಾಗಿ ರವಿವಾರ ಇಲ್ಲಿಯ ಹಿಂದುಜಾ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಬಾಲಿವುಡ್ ನಟ ದಿಲೀಪ್ ಕುಮಾರ್ (98) ಅವರ ದೇಹಸ್ಥಿತಿಯು ಸ್ಥಿರವಾಗಿದೆ ಎಂದು ಕುಟುಂಬ ಮೂಲಗಳು ಸೋಮವಾರ ತಿಳಿಸಿವೆ.
ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ದಿಲೀಪ್ ಕುಮಾರ್ ಗೆ ವೆಂಟಿಲೇಟರ್ ಅಳವಡಿಸಿಲ್ಲ,ಅವರಿಗೆ ಆಮ್ಲಜನಕದ ನೆರವನ್ನು ಒದಗಿಸಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಟ್ವಟರ್ ಹ್ಯಾಂಡಲ್ ತಿಳಿಸಿದೆ. ದಿಲೀಪ್ ಕುಮಾರ್ ಅವರ ಟ್ವಿಟರ್ ಖಾತೆಯನ್ನು ಈಗ ಪತ್ನಿ ಸಾಯಿರಾ ಬಾನು ಮತ್ತು ಸ್ನೇಹಿತ ಫೈಸಲ್ ಫಾರೂಕಿ ಅವರು ನಿರ್ವಹಿಸುತ್ತಿದ್ದಾರೆ.
ಎದೆ ರೋಗಗಳ ತಜ್ಞ ಡಾ.ಜಲೀಲ್ ಪಾರ್ಕರ್ ಅವರು ದಿಲೀಪ್ ಕುಮಾರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದು,ಕೆಲವು ಪರೀಕ್ಷೆಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದೂ ಟ್ವಿಟರ್ ನಲ್ಲಿ ತಿಳಿಸಲಾಗಿದೆ.
Next Story





