ಕೊಲೆ ಪ್ರಕರಣ; ಕಾನೂನಿನ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ: ಸಚಿವ ಕೋಟ
ಕುಂದಾಪುರ, ಜೂ.7: ಕಾನೂನಿನ ವಿಚಾರದಲ್ಲಿ ನಾವು ಮಧ್ಯ ಪ್ರವೇಶ ಮಾಡುವುದಿಲ್ಲ. ಸರಕಾರವಾಗಲಿ, ಶಾಸಕರಾಗಲಿ, ಸಂಸದರಾಗಲಿ ಯಾರೂ ಕೂಡ ಹಲ್ಲೆ, ಕೊಲೆ ಕಾನೂನಿನ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ, ಮಾಡುವುದೂ ಇಲ್ಲ. ಕಾನೂನು ತನ್ನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಯಡಮೊಗೆ ಕೊಲೆ ಪ್ರಕರಣದಲ್ಲಿ ಹಾಲಿ ಶಾಸಕರ ಕೈವಾಡವಿದೆ ಎಂಬ ಮಾಜಿ ಶಾಸಕರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಸುಕುಮಾರ್ ಶೆಟ್ಟಿ, ಬೇಗ ಮತ್ತೆ ಚುನಾವಣೆ ನಡೆಯಬೇಕು ಎಂಬ ಉದ್ದೇಶದಿಂದ ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಕೊಲೆ ಪ್ರಕರಣದ ವಿಚಾರವಾಗಿ ಪ್ರಾಮಾಣಿಕ, ನಿಷ್ಪಕ್ಷವಾದ ತನಿಖೆಗಳಾಗಬೇಕು. ಅಪರಾಧಿಗಳನ್ನು ಬಂಧಿಸ ಬೇಕು. ಬಿಜೆಪಿ ಯವರು ಇದ್ದರೂ, ಯಾರೇ ಶಾಮೀಲಾಗಿದ್ದರೂ ಅವರನ್ನು ಹಿಡಿದು ಬಂಧಿಸುವ ಕೆಲಸವಾಗಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ.
Next Story





