ಮೈಸೂರು: ಸಂಪೂರ್ಣ ಲಾಕ್‌ಡೌನ್ ಆದೇಶ ಹಿಂಪಡೆದ ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

ಮೈಸೂರು,ಜೂ.7: ಕೊರೋನ ಹಿನ್ನೆಲೆ ಮೈಸೂರು ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಅವರು ಹೊರಡಿಸಿದ್ದ ಸಂಪೂರ್ಣ ಲಾಕ್ಡೌನ್ ಆದೇಶವನ್ನ ಇದೀಗ ನೂತನ ಡಿಸಿ ಡಾ.ಬಗಾದಿ ಗೌತಮ್ ಹಿಂಪಡೆದಿದ್ದಾರೆ.
ಜೂ.8ರ ಮಂಗಳವಾರದಿಂದ ಸರ್ಕಾರದ ಆದೇಶದ ನಿಯಮದಂತೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೂ ಅಗತ್ಯವ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಜೂನ್ 14ರವರೆಗೂ ಇದೇ ಆದೇಶ ಮುಂದುವರಿಯಲಿದೆ.
ಈ ಮೂಲಕ ಮೈಸೂರಿನಲ್ಲಿ ಲಾಕ್ಡೌನ್ ಮತ್ತಷ್ಟು ಸಡಿಲಿಕೆಯಾಗಿದೆ. ನಾಳೆಯಿಂದ ಜೂನ್ 14ರವರೆಗೆ ಪ್ರತಿದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ವರ್ಗಾವಣೆಗೂ ಮುನ್ನ ರೋಹಿಣಿ ಸಿಂಧೂರಿ ಹೊರಡಿಸಿದ್ದ ಆದೇಶವನ್ನ ನೂತನ ಡಿಸಿ ಬಗಾದಿ ಗೌತಮ್ ವಾಪಸ್ ಪಡೆದಿದ್ದಾರೆ. ಈ ಹಿಂದೆ ವಾರದಲ್ಲಿ ಮೂರು ದಿನ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಿ ರೋಹಿಣಿ ಸಿಂಧೂರಿ ಆದೇಶಿದ್ದರು.
Next Story





