ಬಸ್ರೂರು: ಕಟ್ಟಡ ಕಾರ್ಮಿಕರಿಗೆ ಕೊರೋನಾ ಲಸಿಕೆ
ಕುಂದಾಪುರ, ಜೂ.7: ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಇಂದು ಬಸ್ರೂರು ಆರೋಗ್ಯ ಕೇಂದ್ರದಲ್ಲಿ 18 ರಿಂದ 44 ವರ್ಷದ 10ಮಂದಿ ಕಟ್ಟಡ ಕಾರ್ಮಿಕರಿಗೆ ಪ್ರಥಮ ಹಂತದ ಲಸಿಕೆಯನ್ನು ನೀಡಲಾಯಿತು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿದ್ಯಾ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಯವರು ಕಾರ್ಮಿಕರಿಗೆ ಲಸಿಕೆ ನೀಡುವುದರಲ್ಲಿ ಸಹಕರಿಸಿದರು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಬಸ್ರೂರು ಘಟಕದ ಅಧ್ಯಕ್ಷ ಶಶಿಕಾಂತ್, ತಾಲೂಕು ಉಪಾಧ್ಯಕ್ಷಸುರೇಶ್ ಪೂಜಾರಿ ಹಾಜರಿದ್ದರು.
Next Story





