ಸೀಲ್ಡೌನ್ ನಾಗರಿಕ ಸಮಿತಿಯಿಂದ ಹಬೆ ಯಂತ್ರ ವಿತರಣೆ

ಮಣಿಪಾಲ, ಜೂ.7: 80 ಬಡಗುಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಕೊರೊನಾ ವ್ಯಾಧಿಯ ಕಾರಣದಿಂದ ಸೀಲ್ಡೌನ್ ಮಾಡಿರುವ ಮನೆ ಹಾಗೂ ಹತ್ತಿರದ ಮನೆ ಸೇರಿದಂತೆ ಒಟ್ಟು ಒಟ್ಟು 25 ಮನೆಗಳಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಹಬೆ ಯಂತ್ರಗಳನ್ನು ಸೋಮವಾರ ವಿತರಿಸಲಾಯಿತು.
ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ರಾಘವೇಂದ್ರ ರಾವ್, ಪ್ರಶಾಂತ್ ಪೂಜಾರಿ, ವಾಸುದೇವ ಚಿತ್ಪಾಡಿ, ಸುಧೀರ್ ನಾಯಕ್, ಮಲ್ಲೇಶ ಉಪಸ್ಥಿತರಿದ್ದರು. ಸುಶೀಲಾ ರಾವ್ ಉಡುಪಿ, ಗಿರಿಜಾ ಹೆಲ್ತ್ಕೆರ್ ಎಂಡ್ ಸರ್ಜಿಕಲ್ ಮಾಲಕ ರವೀಂದ್ರ ಶೆಟ್ಟಿ ಸಹಕರಿಸಿದರು.
Next Story





