ಜೂ.9-13: ಎಸೆಸ್ಸೆಫ್ ವೆಸ್ಟ್ ಝೋನ್‌ನಿಂದ ಕಾರ್ಯಾಗಾರ
ಮಂಗಳೂರು, ಜೂ 7: ಎಸೆಸ್ಸೆಫ್ ದ.ಕ. ಜಿಲ್ಲಾ (ವೆಸ್ಟ್) ವತಿಯಿಂದ ‘ಸ್ಕಿಲ್ಲಿಂಗ್ ಫೋರ್ ಲೈಫ್’ ಎಂಬ ಧ್ಯೇಯದೊಂದಿಗೆ ಜೂ.9ರಿಂದ ಜೂ.13ರವರೆಗೆ ಝೂಂ ಹಾಗೂ ಯುಟ್ಯೂಬ್ ಮೂಲಕ ‘ಎಜುಝೀ 21’ ಕಾರ್ಯಾಗಾರವು ಎಸೆಸ್ಸೆಫ್ ದ.ಕ. ಜಿಲ್ಲೆ (ವೆಸ್ಟ್) ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಎಸೆಸ್ಸೆಫ್ ದ.ಕ.ಜಿಲ್ಲೆ (ವೆಸ್ಟ್) ಸದಸ್ಯ ಮನ್ಸೂರ್ ಹಿಮಮಿ, ತರಬೇತುದಾರ ಎ.ಆರ್. ನುಫೈಲ್, ಎಸೆಸ್ಸೆಫ್ ರಾಜ್ಯ ಕ್ಯಾಂಪಸ್ ಸಿಂಡಿಕೇಟ್ ಸದಸ್ಯ ಸಫ್ದಾರ್ ಹುಸೈನ್ ಹಾಗೂ ಎಸೆಸ್ಸೆಫ್ ಉಡುಪಿ ಡಿವಿಜನ್ ಅಧ್ಯಕ್ಷ ಸೆಯ್ಯದ್ ಯೂಸುಫ್ ನವಾಝ್ ಅಲ್ ಹುಸೈನಿ ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಎಸೆಸ್ಸೆಫ್ ದ.ಕ. ಜಿಲ್ಲೆ (ವೆಸ್ಟ್) ಪ್ರಧಾನ ಕಾರ್ಯದರ್ಶಿ ಹೈದರ್ ಅಲಿ ಕಾಟಿಪಳ್ಳ, ಫೈನಾನ್ಸ್ ಸೆಕ್ರೆಟರಿ ಇಕ್ಬಾಲ್ ಮದ್ಯನಡ್ಕ, ರಾಜ್ಯ ಸಮಿತಿ ಸದಸ್ಯ ಸೆಯ್ಯದ್ ಖುಬೈಬ್ ತಂಙಳ್ ಭಾಗವಹಿಸಲಿದ್ದಾರೆ ಎಂದು ಎಸೆಸ್ಸೆಫ್ ದ.ಕ. ಜಿಲ್ಲೆ (ವೆಸ್ಟ್) ಕ್ಯಾಂಪಸ್ ಕಾರ್ಯದರ್ಶಿ ಝುಹೈರ್ ಬಜ್ಪೆತಿಳಿಸಿದ್ದಾರೆ.





