ಮುಸ್ಲಿಂಯೂತ್ ಲೀಗ್ ತೋಡಾರ್ ವತಿಯಿಂದ ಮನವಿ

ಮಂಗಳೂರು : 'ಶುಚಿತ್ವ ಪರಿಸರ ಉತ್ತಮ ಆರೋಗ್ಯ, ಆರೋಗ್ಯವಂತ ನಾಡು ನಮ್ಮ ಕಲ್ಪನೆ' ಎಂಬ ಧ್ಯೇಯ ವಾಕ್ಯದೊಂದಿಗೆ ತೆಂಕಮಿಜಾರು, ಬಡಗಮಿಜಾರು ಗ್ರಾಮಗಳಲ್ಲಿ ಒಳ ಚರಂಡಿ ನಿರ್ಮಿಸಲು ಮುಸ್ಲಿಂಯೂತ್ ಲೀಗ್ ತೋಡಾರ್ ವತಿಯಿಂದ ಮನವಿ ಸಲ್ಲಿಸಲಾಯಿತು.
ನಮ್ಮ ಗ್ರಾಮವಾದ ತೆಂಕಮಿಜಾರು ಮತ್ತು ಬಡಗಮಿಜಾರು ಗ್ರಾಮಗಳಲ್ಲಿ ಸರಿಯಾದ ಒಳಚರಂಡಿಯ ವ್ಯವಸ್ಥೆ ಇಲ್ಲದಿರುದರಿಂದ ಇನ್ನು ಮುಂದಕ್ಕೆ ಮಳೆಗಾಲ ಪ್ರಾರಂಭವಾದಲ್ಲಿ ನೀರು ನಿಂತು ಸೊಳ್ಳೆಗಳ ಕಾಟದಿಂದ ಮಲೇರಿಯಾ, ಡೆಂಗ್ಯು ಮುಂತಾದ ಕಾಯಿಲೆಗಳು ಬರುವ ಸಾಧ್ಯತೆ ಇರುವುದರಿಂದ ಜನರ ಸಂಕಷ್ಟಗಳನ್ನು ಅರಿತು ಮುಂಜಾಗ್ರತೆಯಾಗಿ ಮಳೆ ನೀರು ನಿಲ್ಲದಂತೆ ಗ್ರಾಮಗಳಲ್ಲಿ ಒಳಚರಂಡಿ ನಿರ್ಮಿಸಲು ತೆಂಕಮೀಜಾರು ಅಧ್ಯಕ್ಷರಿಗೆ ಮತ್ತು ಪಿ.ಡಿ.ಓ ರವರಿಗೆ ಯೂತ್ ಲೀಗ್ ವತಿಯಿಂದ ಮನವಿ ನೀಡಲಾಯಿತು.
Next Story





