ಎಲ್ಲರಿಗೂ ಲಸಿಕೆ ಉಚಿತವಾಗಿದ್ದರೆ, ಖಾಸಗಿ ಆಸ್ಪತ್ರೆಗಳು ಅದಕ್ಕೆ ಏಕೆ ಶುಲ್ಕ ವಿಧಿಸಬೇಕು: ರಾಹುಲ್ ಗಾಂಧಿ
ಹೊಸದಿಲ್ಲಿ: "ಎಲ್ಲರಿಗೂ ಲಸಿಕೆಗಳು ಉಚಿತವಾಗಿದ್ದರೆ, ಖಾಸಗಿ ಆಸ್ಪತ್ರೆಗಳು ಲಸಿಕೆಗೆ ಏಕೆ ಶುಲ್ಕ ವಿಧಿಸಬೇಕು?" ಎಂದು ಸೋಮವಾರ ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೋವಿಡ್ -19 ವಿರುದ್ಧ ಸಾರ್ವತ್ರಿಕ ಉಚಿತ ಲಸಿಕೆ ನೀಡುವಂತೆ ಒತ್ತಾಯಿಸಿದರು.
18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಚುಚ್ಚುಮದ್ದು ನೀಡಲು ತಮ್ಮ ಸರಕಾರ ರಾಜ್ಯಗಳಿಗೆ ಉಚಿತ ಲಸಿಕೆಗಳನ್ನು ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದರು.
ಕೇಂದ್ರದ ವ್ಯಾಕ್ಸಿನೇಷನ್ ನೀತಿಯಲ್ಲಿನ ಬದಲಾವಣೆಗೆ ಕಾಂಗ್ರೆಸ್, ಸುಪ್ರೀಂ ಕೋರ್ಟ್‌ಗೆ ಶ್ರೇಯಸ್ಸು ಸಲ್ಲಿಸಿದೆ. ಸುಪ್ರೀಂ ಕೋರ್ಟ್ ಕೇಂದ್ರದ ಲಸಿಕೆ ನೀತಿಯನ್ನು ಖಂಡಿಸಿದ ನಂತರ ಹಾಗೂ ಲಸಿಕೆ ಅಭಿಯಾನದ ಕುರಿತಾಗಿ ಅಫಿಡವಿಟ್ ಕೋರಿದ ನಂತರ ಕೇಂದ್ರ ಸರಕಾರದಿಂದ ಈ ಘೋಷಣೆ ಬಂದಿದೆ ಎಂದು ರಾಹುಲ್ ಹೇಳಿದರು.
ಪ್ರಧಾನಿ ಮೋದಿಯವರ ಭಾಷಣದ ನಂತರ ರಾಹುಲ್ ಗಾಂಧಿ ಅವರು "ಒಂದು ಸರಳ ಪ್ರಶ್ನೆ - ಎಲ್ಲರಿಗೂ ಲಸಿಕೆಗಳು ಉಚಿತವಾಗಿದ್ದರೆ, ಖಾಸಗಿ ಆಸ್ಪತ್ರೆಗಳು ಲಸಿಕೆಗೆ ಏಕೆ ಶುಲ್ಕ ವಿಧಿಸಬೇಕು" ಎಂದು ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಟ್ವೀಟ್‌ನೊಂದಿಗೆ #FreeVaccineForAll ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದಾರೆ.
"ವ್ಯಾಕ್ಸಿನೇಷನ್ ನೀತಿಯನ್ನು ಪದೇ ಪದೇ ಬದಲಾಯಿಸುವ ಮೂಲಕ ಭಾರತೀಯರ ಜೀವಕ್ಕೆ ಅಪಾಯವನ್ನುಂಟು ಮಾಡಿರುವುದಕ್ಕೆ ಪ್ರಧಾನಿ ತಪ್ಪಿತಸ್ಥರಾಗಿದ್ದಾರೆ. ರಾಜ್ಯಗಳ ಮೇಲೆ ಆರೋಪ ಹೊರಿಸುವ ಬದಲು, ಜನರ ಜೀವಕ್ಕೆ ಅಪಾಯವನ್ನುಂಟುಮಾಡಿದ್ದಕ್ಕಾಗಿ ಪ್ರಧಾನಿ ಕ್ಷಮೆಯಾಚಿಸಬೇಕು" ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ ಹೇಳಿದರು.
One simple question-
— Rahul Gandhi (@RahulGandhi) June 7, 2021
If vaccines are free for all, why should private hospitals charge for them? #FreeVaccineForAll