ಅಸ್ಸಾಂನಲ್ಲಿ ಭಾರೀ ಮಳೆ :3,000 ಸಂತ್ರಸ್ತರು, 22 ಗ್ರಾಮಗಳು ಜಲಾವೃತ

ಹೊಸದಿಲ್ಲಿ, ಜೂ. 7: ಅಸ್ಸಾಂ ಹಾಗೂ ಅರುಣಾಚಲಪ್ರದೇಶದ ಕೆಲವು ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದ ಲಖಿಮ್ಪುರ ಜಿಲ್ಲೆಯಲ್ಲಿ 3,000ಕ್ಕೂ ಅಧಿಕ ಜನರು ತೊಂದರೆಗೀಡಾಗಿದ್ದಾರೆ.
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ರಂಗಾನದಿ ಹಾಗೂ ಸಿಂಗೋರ ನದಿಯಲ್ಲಿ ನೀರು ಏರಿಕೆಯಾಗಿದೆ. ಲಖಿಮ್ಪುರ ಜಿಲ್ಲೆಯ ಕನಿಷ್ಠ 22 ಗ್ರಾಮಗಳು ಜಲಾವೃತವಾಗಿವೆ.
ನೆರೆಯಿಂದಾಗಿ ಉತ್ತರ ಅಸ್ಸಾಂನ ನಾವೋಬೊಚಾ, ಉತ್ತರ ಲಖಿಮ್ಪುರ ಹಾಗೂ ಬಿಪೋಪುರಿಯಾ ಕಂದಾಯ ಸರ್ಕಲ್ನಲ್ಲಿ ಒಟ್ಟು 3031 ಜನರು ಸಂತ್ರಸ್ತರಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೆರೆ ವರದಿ ತಿಳಿಸಿದೆ.
ಲಖಿಮ್ಪುರ ಹಾಗೂ ಧೇಮಾಜಿ ಜಿಲ್ಲೆಗಳಲ್ಲಿ 422.2 ಹೆಕ್ಟೇರ್ ಬೆಳೆ ಭೂಮಿ ಕೂಡ ನೆರ ನೀರಿನಿಂದಾವೃತವಾಗಿದೆ. ಇನ್ನೊಂದೆಡೆ ಲಖಿಮ್ಪುರ ಜಿಲ್ಲೆಯ ಪಚೋನಿ ಪ್ರದೇಶದಲ್ಲಿರುವ ರಂಗಾನದಿ ನೆರೆ ನೀರಿಗೆ ಬಿದಿರಿನ ಸೇತುವೆ ಕೊಚ್ಚಿಕೊಂಡು ಹೋಗಿದೆ.
Next Story