ಮಂಗಳೂರು: ಅಂಚೆ ಇಲಾಖೆಯಿಂದ ಪತ್ರಲೇಖನ ಸ್ಪರ್ಧೆ
ಮಂಗಳೂರು, ಜೂ.8: ‘ಕೋವಿಡ್ ಪಿಡುಗಿನಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಹೇಗೆ ಸುರಕ್ಷಿತವಾಗಿ ಇರಿಸುತ್ತೀರಿ? (How you keeping yourself and your family safe in the Covid Pandemic) ಎಂಬ ವಿಷಯದಲ್ಲಿ ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗವು ಪತ್ರ ಲೇಖನ ಸ್ಪರ್ಧೆ ಹಮ್ಮಿಕೊಂಡಿದೆ. 10ರಿಂದ 15 ವರ್ಷದೊಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಎ4 ಪೇಪರಲ್ಲಿ 1,000 ಪದಗಳು ಮೀರದ ಹಾಗೆ ಬರೆದು, ಜನ್ಮ ದಿನಾಂಕದ ಪುರಾವೆಯ ದಾಖಲೆಯ ಜೊತೆ ಸ್ಕ್ಯಾನ್ ಮಾಡಿ domangalore.ka@indiapost.gov.inಗೆ ಇಮೇಲ್ ಮುಖಾಂತರ ಜೂ.20ರೊಳಗೆ ಕಳುಹಿಸಬೇಕು.
ಇಮೇಲ್ ಕಳುಹಿಸುವಾಗ ‘ಪತ್ರ ಲೇಖನ ಸ್ಪರ್ಧೆ ಜೂನ್ 2021’ ಎಂದು ನಮೂದಿಸಬೇಕು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುವುದು. ಮಾಹಿತಿಗಾಗಿ 0824- 2217076,0824-2218400ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





