ಶೇ.90ರಷ್ಟು ಮಂದಿ ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದಿದ್ದಾರೆ: ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು, ಜೂ.8: ಬಿಜೆಪಿಯಲ್ಲಿ ಇರುವರಲ್ಲಿ ಶೇ.90ರಷ್ಟು ಹಿಂದೆ ಜನತಾದಳ ಹೀಗೆ ಬೇರೆ ಬೇರೆ ಪಕ್ಷದಲ್ಲಿ ಇದ್ದವರೇ. ಅಲ್ಲದೆ, ಈ ಪಕ್ಷದಲ್ಲಿ ಮೂಲ ಮತ್ತು ವಲಸಿಗರು ಎಂಬ ಯಾವುದೇ ಭಾವನೆಯೇ ಇಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ರಚನೆಗೆ ಕಾರಣರಾಗಿರುವಂತಹ 17 ಶಾಸಕರಿಗೆ ಯಾವುದೇ ಅಭದ್ರತೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರ ನಾಯಕತ್ವ ನಂಬಿಕೊಂಡು ಬಂದಿದ್ದೇವೆ. ನಮ್ಮ ಎಲ್ಲರಿಗೂ ಒಳ್ಳೆಯ ಗೌರವ, ಸ್ಥಾನಮಾನ ನೀಡಲಾಗಿದೆ. ಹಾಗಾಗಿ ಯಾವುದೇ ಅಭದ್ರತೆ ಇಲ್ಲ ಎಂದರು.
ನಾವೆಲ್ಲರೂ ಸೊಸೆಯಾಗಿ ಮನೆ ಬಾಗಿಲಿಗೆ ಬಂದು, ಮಗಳಾದವರು. ನಮ್ಮಲ್ಲಿ ಮೂಲ ಮತ್ತು ವಲಸಿಗರು ಎಂಬುದೇ ಇಲ್ಲ ಎಂದ ಅವರು, ಕಳೆದ ಮೂರು ತಿಂಗಳನಿಂದ ನಾಯಕತ್ವ ಬದಲಾವಣೆ ಕುರಿತಂತೆ ಕೇಳಿ ಬರುತ್ತಿದ್ದ ಮಾತುಗಳಿಂದ ತಲೆ ರೋಸಿ ಹೋಗಿ ಆ ರೀತಿ ಹೇಳಿಕೆ ನೀಡಿರಬಹುದು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
Next Story





