‘ಕೃಷ್ಣಾನುಗ್ರಹ’ ಅನಾಥಾಶ್ರಮಕ್ಕೆ ಕಾಂಗ್ರೆಸ್ ಕೊಡುಗೆ

ಉಡುಪಿ, ಜೂ.8: ಕಾರ್ಕಳ ನಗರ ಕಾಂಗ್ರೆಸ್ ಅಧ್ಯಕ್ಷ ಮದುರಾಜ್ ಶೆಟ್ಟಿ ನೇತೃತ್ವದಲ್ಲಿ, ಬ್ಲಾಕ್ ಕಾಂಗ್ರೆಸ್ ಹೆಬ್ರಿ ಹಾಗೂ ಬ್ಲಾಕ್ ಕಾಂಗ್ರೆಸ್ ಕಾರ್ಕಳ ಆಯೋಜಿಸಿದ್ದ ‘ಅನಾಥರೊಂದಿಗೆ ಒಂದು ದಿನ’ ಕಾರ್ಯಕ್ರಮದಡಿ ಅನಾಥ ಮಕ್ಕಳ ಆಶಾಕಿರಣ ಉಡುಪಿ ಸಂತೆಕಟ್ಟೆಯ ಕೃಷ್ಣಾನುಗ್ರಹ ಅನಾಥಾಶ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ನೇತೃತ್ವದಲ್ಲಿ ಅನಾಥ ಮಕ್ಕಳಿಗೆ ವಿವಿಧ ಹಣ್ಣುಹಂಪಲು, ಆಹಾರ ಹಾಗೂ ವಿವಿಧ ವಸ್ತುಗಳನ್ನು ವಿತರಿಸಲಾಯಿತು.
ಪಕ್ಷದ ವತಿಯಿಂದ ಕೊರೋನಾ ನಿರ್ವಹಣೆಯ ಮೂಲಭೂತ ಆದ್ಯತೆಯಡಿ ಥರ್ಮಾಸ್ ಪ್ಲಾಸ್ಕ್, ಸ್ಟೀಮ್ ಇನ್ಹೆಲರ್, ಥರ್ಮಲ್ ಗನ್, ಇನ್ವ ರ್ಟರ್, ಪೇಂಪರ್ಸ್, ಮಾಸ್ಕ್, ಕ್ರೇಡಲ್ ಮೇಟ್ರೆಸ್, ಬಿಸ್ಕಿಟ್, ಲೇಕ್ಟೋಜಿನ್, ಸಿರಿಲೇಕ್, ರಾಗಿಮಾಲ್ಟ್, ತರಕಾರಿ ಹಣ್ಣು ಹಂಪಲು ಸೇರಿದಂತೆ ಮಕ್ಕಳಿಗೆ ಪೂರಕವಾದ ಸತ್ವಯುತ ಆಹಾರ, ಔಷದೀಯ ಪರಿಕರಗಳನ್ನೊಳಗೊಂಡ ಪ್ಯಾಕೇಜನ್ನು ಹಾಗೂ 10,000ರೂ. ಆರ್ಥಿಕ ಸಹಾಯ ಧನವನ್ನು ಅನಾಥಾಶ್ರಮಕ್ಕೆ ನೀಡಲಾಯಿತು.
ಜಿಲ್ಲಾ ಕಾಂಗ್ರೆಸ್ ಆಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಅನಾಥಾಶ್ರಮದ ಆಡಳಿತಾಧಿಕಾರಿ ಉದಯ ಕುಮಾರ್‌ಗೆ ಪ್ಯಾಕೇಜ್ ಹಸ್ತಾಂತರಿಸಿ ದರು. ಇತ್ತೀಚೆಗೆ ಈ ಅನಾಥಾಶ್ರಮದ 12 ಮಕ್ಕಳು ಕೋವಿಡ್‌ಗೆ ಪಾಸಿಟಿವ್ ಬಂದಿದ್ದು ಚೇತರಿಸಿಕೊಳ್ಳುತಿದ್ದಾರೆ.
ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್, ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನಲಿಯೋ, ಹಿರಿಯ ಕಾಂಗ್ರೆಸಿಗರಾದ ನವೀನ್ ದೇವಾಡಿಗ, ಡಾ.ಸುನೀತಾ ಶೆಟ್ಟಿ, ಪ್ರಶಾಂತ್ ಜತ್ತನ್ನ, ಜನಾರ್ದನ ಭಂಡಾರ್ಕಾರ್, ಮಾಧವ ಬನ್ನಂಜೆ, ಸೌರಭ್ ಬಲ್ಲಾಳ್, ಸದಾಶಿವ ಕಟ್ಟೆಗುಡ್ಡೆ, ಸುನೀಲ್ ಕುಮಾರ್ ಭಂಡಾರಿ, ಸುನೀಲ್ ಕೋಟ್ಯಾನ್ ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ ಪ್ರಸ್ತಾವನೆ ಮಾತುಗಳೊಂದಿಗೆ ಸ್ವಾಗತಿಸಿ ವಂದಿಸಿದರು.








