ಗುರುಪುರ : ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೇವಾ ಕಾರ್ಯಕ್ರಮದ ಸಮಾರೋಪ

ಮಂಗಳೂರು, ಜೂ.8: ಒಂದುವರೆ ತಿಂಗಳ ಹಿಂದೆ ಮಾಜಿ ಶಾಸಕ ಡಾ.ಮೊದಿನ್ ಬಾವಾ ಅವರು ಗುರುಪುರದ ಬಾಮಿ ಶಾಲೆಯಲ್ಲಿ ತೆರೆದಿದ್ದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೇವಾ ಕಾರ್ಯಕ್ರಮದ ಸಮಾರೋಪವು ಸೋಮವಾರ ನಡೆಯಿತು.
ಕೇಂದ್ರದಲ್ಲಿ ಹಗಲಿರುಳು ಸೇವೆ ಸಲ್ಲಿಸಿದ ಕೊರೋನ ವಾರಿಯರ್ಸ್ ತಂಡದ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದ ಮೊಯ್ದಿನ್ ಬಾವ ‘ತಾತ್ಕಾಲಿಕ ನೆಲೆಯಲ್ಲಿ ಗುರುಪುರ ಸಹಿತ ಅಡ್ಯಾರು ಮತ್ತು ಕಾಟಿಪಳ್ಳದಲ್ಲಿ ತೆರೆಯಲಾಗಿರುವ ಏಳು ಕೋವಿಡ್ ಕೇರ್ ಸೆಂಟರ್‌ಗಳ ವೈದ್ಯಕೀಯ ಉಸ್ತುವಾರಿ ನೋಡಿ ಕೊಂಡಿರುವ ಡಾ. ಭಾಸ್ಕರ್ ಕೂಳೂರು ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.ಕೋವಿಡ್ ಕೇರ್ ಸೆಂಟರ್‌ಗೆ ವೈದ್ಯಕೀಯ ಸಲಹೆ ನೀಡಿದ ಡಾ. ಸಿದ್ದೀಕಿ ಅಡ್ಡೂರು, ಡಾ. ಶ್ವೇತಾ ಪ್ರಭು ಗುರುಪುರ, ಸಹಾಯಕ ರಹ್ಮಾನ್ ಅಡ್ಡೂರು ಅವರ ಸೇವೆಯನ್ನು ನೆನಪಿಸಲಾಯಿತು.
ಮಾಜಿ ಶಾಸಕ ಮೊಯ್ದಿನ್ ಬಾವ ಮಾತನಾಡಿ, ಏಳು ಸೆಂಟರ್‌ಗಳಲ್ಲಿ 300ಕ್ಕೂ ಅಧಿಕ ಅಶಕ್ತ ಸೋಂಕಿತರು ಸುಶ್ರೂಷೆ ಪಡೆದುಕೊಂಡಿದ್ದಾರೆ. ಸೆಂಟರ್ ತೆರೆಯಲು ಜಿಲ್ಲಾಧಿಕಾರಿ ವಿಶೇಷ ಅನುಮತಿ ನೀಡಿ ಸಹಕರಿಸಿದ್ದಾರೆ ಎಂದರು.
ಹುಸೈನ್ ಕಾಟಿಪಳ್ಳ ಪ್ರಸ್ತಾವಿಕ ಮಾತನಾಡಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಗುರುಪುರ ಕೋವಿಡ್ ಕೇರ್ ಸೆಂಟರ್‌ನ ಉಸ್ತುವಾರಿ ಮುಫೀದ್ ಅಡ್ಡೂರು, ಗುರುಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಮಲ್ಲಿ, ಗ್ರಾಪಂ ಸದಸ್ಯ ದಾವೂದ್, ಶಾಲಾ ಸಂಚಾಲಕ ರಿಯಾಝ್ ಮಿಲನ್, ಸ್ಥಾಪಕ ಮುಹಮ್ಮದ್ ಗುರುಪುರ, ಕಾರ್ಯದರ್ಶಿ ಸೈಫುಲ್ಲ ಗುರುಪುರ, ಜಿಪಂ ಮಾಜಿ ಸದಸ್ಯ ಯು.ಪಿ. ಇಬ್ರಾಹಿಂ, ಹರೀಶ್ ಭಂಡಾರಿ, ಗ್ರಾಪಂ ಮಾಜಿ ಸದಸ್ಯೆ ಉಮೈ ಬಾನು ಮತ್ತಿತರರು ಉಪಸ್ಥಿತರಿದ್ದರು. ಅಬ್ದುಲ್ ಸಮದ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಸೈಫುಲ್ಲ ಕಾಟಿಪಳ್ಳ ವಂದಿಸಿದರು.







