ಚುನಾವಣಾ ಸುಧಾರಣೆ ಕುರಿತ ಪ್ರಸ್ತಾವನೆ ಶೀಘ್ರ ಕ್ರಮಕ್ಕೆ ಚುನಾವಣಾ ಆಯುಕ್ತರ ಆಗ್ರಹ

ಹೊಸದಿಲ್ಲಿ: ಚುನಾವಣಾ ಸುಧಾರಣೆ ಕುರಿತು ಕೇಂದ್ರಕ್ಕೆ ಕಳಿಸಿರುವ ಪ್ರಸ್ತಾವನೆಯ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯ ಚುನಾವಣಾ ಆಯುಕ್ತರು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗೆ ಮಂಗಳವಾರ ಪತ್ರ ಬರೆದಿರುವುದಾಗಿ ವರದಿಯಾಗಿದೆ.
ಪ್ರಸ್ತಾವನೆಯ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದು ಅವರು ಶೀಘ್ರ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ. ಚುನಾವಣಾ ಅಫಿದಾವಿತ್ನಲ್ಲಿ ಸುಳ್ಳು ಮಾಹಿತಿ ನೀಡಿದವರಿಗೆ ಇರುವ ಜೈಲುಶಿಕ್ಷೆಯನ್ನು 6 ತಿಂಗಳಿಂದ 2 ವರ್ಷಕ್ಕೆ ಹೆಚ್ಚಿಸುವುದು ಇದರಲ್ಲಿ ಪ್ರಮುಖವಾಗಿದೆ. 2 ವರ್ಷ ಜೈಲುಶಿಕ್ಷೆ ಅನುಭವಿಸಿದವರು 6 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಕಾನೂನಿದೆ. ಚುನಾವಣೆಯ ಪ್ರಚಾರ ಕಾರ್ಯ ಮುಕ್ತಾಯವಾದ ದಿನದಿಂದ ಮತದಾನದ ದಿನದವರೆಗೆ ದಿನಪತ್ರಿಕೆಗಳಲ್ಲಿ ರಾಜಕೀಯ ಜಾಹೀರಾತನ್ನು ನಿಷೇಧಿಸುವುದು ಮತ್ತೊಂದು ಪ್ರಸ್ತಾವನೆಯಾಗಿದೆ.
ಜೊತೆಗೆ, ಪಾವತಿ ಸುದ್ಧಿಯನ್ನು ಚುನಾವಣಾ ಅಪರಾಧವೆಂದು ಪರಿಗಣಿಸುವಂತೆ ಸಲಹೆ ನೀಡಲಾಗಿದೆ.