ಮಸೀದಿ, ಮದ್ರಸಗಳಿಗೆ ಧಾರ್ಮಿಕ ದತ್ತಿ ಇಲಾಖೆಯ ಅನುದಾನ ಬೇಡ: ರಹೀಂ ಉಚ್ಚಿಲ್

ಮಂಗಳೂರು, ಜೂ.9: ಮಸೀದಿ ಮತ್ತು ಮದ್ರಸಗಳಿಗೆ ಧಾರ್ಮಿಕ ದತ್ತಿ ಇಲಾಖೆಯ ಅನುದಾನ ನೀಡುವುದು ಬೇಡ. ಬದಲಾಗಿ ವಕ್ಫ್ ಇಲಾಖೆಯಿಂದಲೇ ಮಸೀದಿ, ಮದ್ರಸಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮನವಿ ಮಾಡಿದ್ದಾರೆ.
ದ.ಕ.ಜಿಲ್ಲೆಯ 41 ಮಸೀದಿ ಮತ್ತು ಮದ್ರಸಗಳ ಮೌಲವಿಗಳಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ತುಷ್ಟೀಕರಣ ರಾಜಕೀಯದಿಂದಾಗಿ ವಕ್ಫ್ ಸಂಸ್ಥೆಗಳು ಹೀನಾಯ ಸ್ಥಿತಿಗೆ ತಲುಪಿದೆ. ಯಾವುದೇ ಕಾರಣಕ್ಕೂ ದೇವಸ್ಥಾನ, ದೈವಸ್ಥಾನದ ಹಣವನ್ನು ಮಸೀದಿ, ಮದ್ರಸಗಳಿಗೆ ನೀಡಬಾರದು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಥವಾ ವಕ್ಫ್ ಬೋರ್ಡ್‌ನಿಂದ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಅನ್ವರ್ ಮಾಣಿಪ್ಪಾಡಿ ವಕ್ಫ್ ಹಗರಣಕ್ಕೆ ಸಂಬಂಧಿಸಿ ತಯಾರಿಸಿದ ವರದಿಯನ್ನು ಸದನದಲ್ಲಿ ಮಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಜರುಗಿಸಬೇಕು ಎಂದೂ ರಹೀಂ ಉಚ್ಚಿಲ್ ಒತ್ತಾಯಿಸಿದ್ದಾರೆ.
Next Story





