ದ.ಕ. ಜಿಲ್ಲೆಯಲ್ಲಿ ಬುಧವಾರ ಕೋವಿಡ್ಗೆ ಮೂವರು ಬಲಿ; 594 ಮಂದಿಗೆ ಸೋಂಕು ದೃಢ

ಸಾಂದರ್ಭಿಕ ಚಿತ್ರ
ಮಂಗಳೂರು, ಜೂ.9: ದ.ಕ. ಜಿಲ್ಲೆಯಲ್ಲಿ ಬುಧವಾರ 3 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 961ಕ್ಕೇರಿದೆ. ಬುಧವಾರ ಮೃತಪಟ್ಟವರಲ್ಲಿ ಮಂಗಳೂರು, ಸುಳ್ಯ, ಬಂಟ್ವಾಳ ತಾಲೂಕಿನ ತಲಾ ಒಬ್ಬರು ಸೇರಿದ್ದಾರೆ.
ಅಲ್ಲದೆ ಬುಧವಾರ ಜಿಲ್ಲೆಯಲ್ಲಿ 594 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಪಾಸಿಟಿವ್ ಶೇಖಡಾವಾರು 15.66 ಇದೆ. ಇದರೊಂದಿಗೆ ಈವರೆಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿಗೊಗಾದವರ ಸಂಖ್ಯೆ 81,594ಕ್ಕೇರಿದೆ.
ಬುಧವಾರ 637 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅದರಂತೆ ಈವರೆಗೆ ಗುಣಮುಖರಾದವರ ಸಂಖ್ಯೆ 73,647ಕ್ಕೇರಿದೆ.
ಸದ್ಯ ಜಿಲ್ಲೆಯಲ್ಲಿ 6,986 ಸಕ್ರಿಯ ಪ್ರಕರಣವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರಗೆ 8,79,612 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 7,98,018 ಮಂದಿಯ ವರದಿ ನೆಗೆಟಿವ್ ಬಂದಿದೆ.
ದಂಡ ವಸೂಲಿ: ಮಾಸ್ಕ್ ನಿಯಮ ಉಲ್ಲಂಘಿಸಿದ 62,231 ಮಂದಿಯಿಂದ 73,10,567 ರೂ. ದಂಡ ವಸೂಲು ಮಾಡಲಾಗಿದೆ.
14 ಕಡೆ ಕಂಟೈನ್ಮೆಂಟ್ ವಲಯ: ಮಂಗಳೂರಿನಲ್ಲಿ ಐದು, ಬೆಳ್ತಂಗಡಿಯಲ್ಲಿ ನಾಲ್ಕು, ಪುತ್ತೂರಿನಲ್ಲಿ ಮೂರು, ಸುಳ್ಯದಲ್ಲಿ ಎರಡು ಸಹಿತ ದ.ಕ.ಜಿಲ್ಲೆಯಲ್ಲಿ 14 ಕಂಟೈನ್ಮೆಂಟ್ ವಲಯಗಳನ್ನು ಬುಧವಾರ ಘೋಷಣೆ ಮಾಡಲಾಗಿದೆ.
ಬುಧವಾರ ಜಿಲ್ಲೆಯಲ್ಲಿ 16,429 ಮಂದಿಗೆ ಲಸಿಕೆ ನೀಡಲಾಗಿದೆ.







