ಕೊರೋನ ವೈರಸ್: ದೇಶದಲ್ಲಿ 92,596 ಪ್ರಕರಣ ದಾಖಲು

ಹೊಸದಿಲ್ಲಿ, ಜೂ.9: ಬುಧವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ ದೇಶದಲ್ಲಿ ಕೊರೋನ ವೈರಸ್ ಸೋಂಕಿನ 92,596 ಹೊಸ ಪ್ರಕರಣ ಮತ್ತು 2,219 ಸಾವಿನ ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. 18,000ಕ್ಕೂ ಹೆಚ್ಚು ದೈನಂದಿನ ಸೋಂಕು ಪ್ರಕರಣದೊಂದಿಗೆ ತಮಿಳುನಾಡು ಮತ್ತೆ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದು, ಕೇರಳದಲ್ಲಿ 15,000ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದಲ್ಲಿ 11,000ಕ್ಕೂ ಕಡಿಮೆ ಪ್ರಕರಣ ದಾಖಲಾಗಿದ್ದು ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 2.9 ಕೋಟಿಗೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 12.31 ಲಕ್ಷಕ್ಕೆ ಇಳಿದಿದೆ. ಈ ಮಧ್ಯೆ, ಕೇಂದ್ರ ಆರೋಗ್ಯ ಇಲಾಖೆ ದೇಶದ ಎರಡು ಲಸಿಕೆ ಉತ್ಪಾದನೆ ಸಂಸ್ಥೆಗಳಿಂದ 44 ಕೋಟಿ ಡೋಸ್ ಲಸಿಕೆಗೆ ಕಾರ್ಯಾದೇಶ(ಆರ್ಡರ್) ಸಲ್ಲಿಸಿದೆ ಎಂದು ಮೂಲಗಳು ಹೇಳಿವೆ. ದೇಶದ ಎಲ್ಲಾ ವಯಸ್ಕರಿಗೂ ಉಚಿತ ಲಸಿಕೆ ನೀಡುವ ಉದ್ದೇಶದಿಂದ ಲಸಿಕೆ ಸಂಸ್ಥೆಗಳು ಉತ್ಪಾದಿಸುವ 75% ಲಸಿಕೆಯನ್ನು ಕೇಂದ್ರ ಸರಕಾರ ಖರೀದಿಸಲಿದೆ ಎಂದು ಪ್ರಧಾನಿ ಮಂಗಳವಾರ ಘೋಷಿಸಿದ್ದರು.
Next Story