ಉಡುಪಿ: ಆದ್ಯತೆ ಮೇರೆಗೆ ಬಸ್ಸು ಚಾಲಕ, ನಿರ್ವಾಹಕರಿಗೆ ಕೋವಿಡ್ ಲಸಿಕೆ
ಉಡುಪಿ, ಜೂ.10: ಉಡುಪಿ ಜಿಲ್ಲೆಯ ತಾಲೂಕುಗಳಾದ ಉಡುಪಿ, ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳಗಳಲ್ಲಿ ವಾಸಿಸುತ್ತಿರುವ 18ರಿಂದ 44 ವರ್ಷದೊಳಗಿನ ವಯೋಮಿತಿಯ ಬಸ್ಸು ಚಾಲಕರು/ನಿರ್ವಾಹಕರು ಹಾಗೂ ಸಹಾಯಕರುಗಳಿಗೆ ಆದ್ಯತೆ ಮೇರೆಗೆ ಉಚಿತ ಕೋವಿಡ್-19 ಲಸಿಕೆಯನ್ನು ನೀಡಲಾಗುವುದು.
ಈ ಹಿನ್ನೆಲೆಯಲ್ಲಿ ಎಲ್ಲಾ ಬಸ್ಸು ಮಾಲಕರುಗಳು ತಮ್ಮ ಸಂಘದ ಮೂಲಕ, ಪ್ರಪತ್ರ-3ರಲ್ಲಿ ಅರ್ಜಿಗಳನ್ನು ಕ್ರೋಢಿಕರಿಸುವ ಮೂಲಕ ಅಥವಾ ಭಾರೀ ಮಜಲು ವಾಹನ (ಬಸ್ಸು) ಚಾಲಕರುಗಳು/ ನಿರ್ವಾಹಕರುಗಳು ಹಾಗೂ ಸಹಾಯಕರುಗಳು ಖುದ್ದಾಗಿ ಭಾವಚಿತ್ರ ಹೊಂದಿರುವ ಆಧಾರ್ ಮತ್ತು ಡಿಎಲ್/ಸಿಎಲ್‌ನ ಜೆರಾಕ್ಸ್, ಮೊಬೈಲ್ ಸಂಖ್ಯೆಯೊಂದಿಗೆ ಅರ್ಜಿಗಳನ್ನು ಪ್ರಪತ್ರ(3) ರಲ್ಲಿ ಭರ್ತಿ ಮಾಡಿ , ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ನೀಡಿ ತತ್ಸಂಬಂಧ ಲಸಿಕಾ ಪ್ರಪತ್ರವನ್ನು ಪಡೆದು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಹೆಚ್‌ಸಿ) ಕೋವಿಡ್-19 ಲಸಿಕೆಗಳನ್ನು ಪಡೆದು ಕೊಳ್ಳಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.





