ನಾನು ಕಾಂಗ್ರೆಸ್ನಲ್ಲಿದ್ದೇನೆ, ಟಿಎಂಸಿಗೆ ಸೇರುತ್ತಿಲ್ಲ: ವದಂತಿಗೆ ತೆರೆ ಎಳೆದ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್

photo: rediff.com
ಕೋಲ್ಕತಾ: ದಿವಂಗತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಅವರು ಟಿಎಂಸಿಗೆ ಸೇರುವ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದರು ಹಾಗೂ ತಾನು ಕಾಂಗ್ರೆಸ್ನಲ್ಲಿ ಮುಂದುವರಿಯಲಿದ್ದೆನೆ ಎಂದು ಹೇಳಿದರು.
"ನಾನು ಇದೀಗ ತೃಣಮೂಲ ಭವನದಿಂದ ಸುಮಾರು 300 ಕಿ.ಮೀ ದೂರದಲ್ಲಿದ್ದೇನೆ ... ಹಾಗಾಗಿ ಯಾರಾದರೂ ನನ್ನನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಇಂದು ಮಧ್ಯಾಹ್ನ ಯಾವುದೇ ಪಕ್ಷಕ್ಕೆ ಸೇರುವುದು ನನಗೆ ಅಸಾಧ್ಯ" ಎಂದು ಮುಖರ್ಜಿ ಹೇಳಿದರು
Next Story





