ಕಪ್ಪು ಶಿಲೀಂಧ್ರ ಔಷಧದ ಮೇಲೆ ಯಾವುದೇ ತೆರಿಗೆ ಇಲ್ಲ: ಜಿಎಸ್ ಟಿ ಮಂಡಳಿ ನಿರ್ಧಾರ
ಕೋವಿಡ್ ಲಸಿಕೆಗಳ ಮೇಲೆ 5 ಶೇ. ಜಿಎಸ್ ಟಿ ಮುಂದುವರಿಕೆ

ಹೊಸದಿಲ್ಲಿ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಅಗತ್ಯವಿರುವ ಔಷಧಿಗಳು, ಕೆಲವು ಆಸ್ಪತ್ರೆ ಉಪಕರಣಗಳು ಹಾಗೂ ಇತರ ವಸ್ತುಗಳ ಮೇಲಿನ ತೆರಿಗೆಯನ್ನು ಸರಕು ಹಾಗೂ ಸೇವಾ ತೆರಿಗೆ(ಜಿಎಸ್ ಟಿ) ಮಂಡಳಿ ಕಡಿಮೆ ಮಾಡಿದೆ.
ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಾಂಕ್ರಾಮಿಕ ರೋಗದ ಮಧ್ಯೆ ಸಚಿವರುಗಳು ಮಾಡಿದ ಶಿಫಾರಸುಗಳನ್ನು ಆಧರಿಸಿ ತೆರಿಗೆ ಕಡಿತವನ್ನು ಮಾಡಲಾಗಿದೆ
ಕೋವಿಡ್ ಸೋಂಕಿತ ಜನರ ಮೇಲೆ ಪರಿಣಾಮ ಬೀರುವ ಶಿಲೀಂಧ್ರ ರೋಗವಾದ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಟೊಸಿಲಿಝುಮಾಬ್ ಹಾಗೂ ಆಂಫೊಟೆರಿಸಿನ್ ಬಿ ಯಂತಹ ಔಷಧಿಗಳಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
ತೆರಿಗೆ ಕಡಿತವು ಸೆಪ್ಟೆಂಬರ್ 30 ರವರೆಗೆ ಅನ್ವಯವಾಗುತ್ತದೆ ಹಾಗೂ ಅದನ್ನು ಮತ್ತೆ ವಿಸ್ತರಿಸಬಹುದು.
ಕೋವಿಡ್ ಲಸಿಕೆಗಳಿಗೆ ಶೇಕಡಾ 5 ರಷ್ಟು ಜಿಎಸ್ ಟಿ ವಿಧಿಸುವುದನ್ನು ಮುಂದು ವರಿಸಲಾಗುತ್ತದೆ. ಕೋವಿಡ್ ಪರೀಕ್ಷಾ ಕಿಟ್‌ಗಳಿಗೆ ಕಚ್ಚಾ ವಸ್ತುಗಳ ಮೇಲಿನ ತೆರಿಗೆ ಕಡಿತ ಮಾಡಲಾಗುವುದಿಲ್ಲ.





