ಜೂ.16ರಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಆನ್‌ಲೈನ್‌ನಲ್ಲಿ ವಿಶ್ವ ಕಲಾ ಸಂಭ್ರಮ
ಉಡುಪಿ, ಜೂ.12: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ಪ್ರಸ್ತುತಿಯಲ್ಲಿ ಈ ಸಮುದಾಯ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ವಿಶ್ವ ಸ್ಥಳೀಕರಣ ದಿನಾಚರಣೆಯ ಪ್ರಯುಕ್ತ 5 ದಿನಗಳ ಕಾಲ ಆನ್‌ಲೈನ್‌ನಲ್ಲಿ ‘ವಿಶ್ವ ಕಲಾ ಸಂಭ್ರಮ’ವನ್ನು ಜೂ.16ರಿಂದ 20ರವರೆಗೆ ಆಯೋಜಿಸಲಾಗಿದೆ.
ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಸ್ಥಳೀಯ ಕಲಾವಿದರಾಗಿದ್ದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಛಾಯಾಗ್ರಾಹಕ ಆಸ್ಟ್ರೋ ಮೋಹನ್, ಜಾದುಗಾರ ಜೂನಿಯರ್ ಶಂಕರ್, ನಟಿ ಮಾನಸಿ ಸುಧೀರ್, ರೂಬಿಕ್ ಕ್ಯೂಬ್ ಸಾಧಕ ಪೃಥ್ವೀಶ ಭಟ್, ಯೋಗಪಟು ತನುಶ್ರೀ ಪಿತ್ರೋಡಿ ಇದರಲ್ಲಿ ಭಾಗವಹಿಸಲಿದ್ದಾರೆ.
ಈ ಕಲಾ ಸಂಭ್ರಮ ಜೂ.16ರಿಂದ 20ರವರೆಗೆ ಪ್ರತಿದಿನ ಸಂಜೆ ಆರರಿಂದ -ಸಂಸ್ಕೃತಿ ವಿಶ್ವ- ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್.ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





