ಕವಿ ಸಿದ್ಧಲಿಂಗಯ್ಯಗೆ ಶ್ರದ್ಧಾಂಜಲಿ ಸಭೆ

ಉಡುಪಿ, ಜೂ.12: ರಾಜ್ಯದಲ್ಲಿ ಬೂಸ ಚಳುವಳಿಯನ್ನು ಹುಟ್ಟು ಹಾಕಿದ ದಲಿತ ಕವಿ ಡಾ.ಸಿದ್ದಲಿಂಗಯ್ಯರವರಿಗೆ ಅಂಬೇಡ್ಕರ್ ಯುವಸೇನೆ ವತಿಯಿಂದ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ದಲಿತ ಚಿಂತಕ ಜಯನ್ ಮಲ್ಪೆ, ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಮಲ್ಪೆಶಾಖೆ ಅಧ್ಯಕ್ಷ ಕೃಷ್ಣ ಶ್ರೀಯಾನ್, ಗುಣವಂತ ಪಾಲನ್, ಪ್ರಶಾಂತ್ ಬಿ.ಎನ್., ಸುಮಿತ್ ಪಾಲನ್, ರಾಮೋಜಿ ಅಮೀನ್, ಸುಶೀಲ್ ಕೊಡವೂರು, ಅರುಣ್ ಸಾಲ್ಯಾನ್, ಪ್ರಸಾದ್ ಮಲ್ಪೆಮೊದಲಾದ ವರು ಹಾಜರಿದ್ದರು.
ದಲಿತ ಕವಿಗೆ ಸಂತಾಪ: ದಲಿತ ಚಳುವಳಿಗೆ ಜಾನಪದ ಸೊಗಡಿನ ಗ್ರಾಮ ಭಾಷೆಯ ಕಿಚ್ಚು ಹೊತ್ತಿಸಿದ ದಲಿತರ ಸಾಕ್ಷಿ ಪ್ರಜ್ಞೆ, ಬಂಡಾಯ ಕವಿ ಡಾ. ಸಿದ್ಧಲಿಂಗಯ್ಯ ನಿಧನಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ್ ತೆಕ್ಕಟ್ಟೆ, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಮಂಜುನಾಥ್ ಬಾಳ್ಕುದ್ರು, ಶ್ರೀಧರ್ ಕುಂಜಿಬೆಟ್ಟು, ತಾಲೂಕು ಸಂಚಾಲಕ ಶಂಕರ್ದಾಸ್ ಚೆಂಡ್ಕಳ, ರಾಘವ ಕುಕುಜೆ, ವಿಠಲ ಉಚ್ಚಿಲ, ದೇವು ಹೆಬ್ರಿ, ನಾಗರಾಜ ಕುಂದಾಪುರ ಸಂತಾಪ ಸೂಚಿಸಿದ್ದಾರೆ.





