ದೇವಾಲಯದ ಅರ್ಚಕಿಯಾಗಲು ಬಯಸುವ ಮಹಿಳೆಯರಿಗೆ ತಮಿಳುನಾಡು ಸರಕಾರದಿಂದ ತರಬೇತಿ
photo: pksekarbabu.com
ಚೆನ್ನೈ: ದೇವಾಲಯದ ಅರ್ಚಕಿಯಾಗಲು ಬಯಸುವ ಮಹಿಳೆಯರಿಗೆ ಅಗತ್ಯವಾದ ತರಬೇತಿಯನ್ನು ನೀಡಲಾಗುವುದು ಎಂದು ತಮಿಳುನಾಡು ಸಚಿವ ಪಿ.ಕೆ.ಸೇಕರ್ ಬಾಬು ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಈ ಹೇಳಿಕೆ ನೀಡಿದ್ದಾರೆ.
"ಆಸಕ್ತಿ ಹೊಂದಿರುವ ಮಹಿಳೆಯರು ಸಹ ಪುರೋಹಿತರಾಗಬಹುದು; ಅವರಿಗೆ ತರಬೇತಿ ನೀಡಲಾಗುತ್ತದೆ ಹಾಗೂ ಇಲಾಖೆಯಿಂದ ನಿರ್ವಹಿಸಲ್ಪಡುವ ದೇವಾಲಯಗಳಲ್ಲಿ ನೇಮಕ ಮಾಡಲಾಗುತ್ತದೆ" ಎಂದು ಮಾನವ ಸಂಪನ್ಮೂಲ ಹಾಗೂ ಸಿಇ ಸಚಿವ ಪಿ.ಕೆ.ಸೇಕರ್ ಬಾಬು ಹೇಳಿದರು.
"ರಾಜ್ಯದ 47 ಎಚ್ ಆರ್ ಹಾಗೂಸಿಇ ದೇವಾಲಯಗಳಲ್ಲಿ ಈಗಾಗಲೇ ತಮಿಳು ಅರ್ಚನೆ ನಡೆಯುತ್ತಿದೆ. ಈ 47 ದೇವಾಲಯಗಳಲ್ಲಿ, ಶೀಘ್ರದಲ್ಲೇ ಫಲಕಗಳನ್ನು ಹಾಕಲಾಗುವುದು ಎಂದು ಸಚಿವರು ಹೇಳಿದರು.
Next Story