ಕೈಕಂಬ, ವಾಮಂಜೂರು, ಕೊಂಪದವಿನಲ್ಲಿ ‘100 ನಾಟೌಟ್’ ಪ್ರತಿಭಟನೆ

ಮಂಗಳೂರು, ಜೂ.13: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಮಾಜಿ ಶಾಸಕ ಮೊಯ್ದಿನ್ ಬಾವಾ ನೇತೃತ್ವದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಗುರುಪುರ ಕೈಕಂಬ, ವಾಮಂಜೂರು, ಕೊಂಪದವು ಪೆಟ್ರೋಲ್ ಬಂಕ್ ಎದುರು ರವಿವಾರ ಜಾಗಟೆ ಬಾರಿಸಿ, ತೈಲರಹಿತ ವಾಹನ ತಳ್ಳಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಮೊಯ್ದಿನ್ ಬಾವ ಅಧಿಕಾರಕ್ಕೇರುವ ಮುಂಚೆ 30ರೂ.ಗೆ ಪೆಟ್ರೋಲ್, 250 ರೂ.ಗೆ ಅಡುಗೆ ಅನಿಲ ನೀಡುತ್ತೇವೆ, ದೇಶವಾಸಿಗಳಿಗೆ ‘ಅಚ್ಛೇ ದಿನ್ ಆಯೇಗಾ’ ಎಂದು ಹೇಳಿದ್ದ ಪ್ರಧಾನಿ ಮೋದಿ ಕಳೆದ ಏಳು ವರ್ಷಗಳಲ್ಲಿ ತೈಲ ಬೆಲೆ ಗಗನಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿ ದೇಶದ ಜನತೆಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಗಣೇಶ್, ಪಕ್ಷದ ಮುಖಂಡರಾದ ಫಾಸ್ಕಲ್ ಫೆರ್ನಾಂಡಿಸ್, ಜಿ ಸುನಿಲ್, ಪುರುಷೋತ್ತಮ ಮಲ್ಲಿ, ವಿನಯ ಕುಮಾರ್ ಶೆಟ್ಟಿ, ಬಾಷಾ ಮಾಸ್ಟರ್, ಟಿ ಎಂ ಇರ್ಫಾನ್, ಮುಫೀದ್ ಅಡ್ಡೂರು, ಚಂದ್ರಹಾಸ ಶೆಟ್ಟಿ, ಹೆರಾಲ್ಡ್ ಲೋಬೊ, ದಾವೂದ್, ಹರೀಶ್ ಭಂಡಾರಿ, ಶೇಖ್, ಮೊದಿನ್ ಬಾವಾ ಬಡಗ ಎಡಪದವು, ಸಂದೇಶ ಲೋಬೊ, ರಝಾಕ್ ಮಳಲಿ, ಅಝೀಝ್ ಕಂದಾವರ, ಮುಚ್ಚೂರು ಗ್ರಾಪಂ ಸದಸ್ಯ ರಾಜೇಂದ್ರ ಪಿಂಟೊ, ಲ್ಯಾನ್ಸಿ ವಾಝ್, ವಿನ್ಸೆಂಟ್ ಮೋರಸ್, ವೀರೇಂದ್ರ ಸಾಲ್ಯಾನ್, ಲೋಕೇಶ್, ಮೋಹನ್, ಲಾರೆನ್ಸ್ ಡಿಸೋಜ, ರಾಜ್‌ಕುಮಾರ್ ಶೆಟ್ಟಿ, ಶ್ರೀಧರ್ ಬೊಂಡಂತಿಲ, ರೋಹಿತ್ ಬೊಂಡಂತಿಲ, ಬಾಲಕೃಷ್ಣ ಕರ್ಕೇರ, ಸದಾಶಿವ ಅಮೀನ್, ಕೃಷ್ಣ ಕೋಟ್ಯಾನ್ ಸದಾಶಿವ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.







