ಜೆಪ್ಪು ಸಂತ ಆಂತೋನಿಯ ವಾರ್ಷಿಕ ಮಹೋತ್ಸವ

ಮಂಗಳೂರು, ಜೂ.13: ನಗರದ ಜೆಪ್ಪು ಸಂತ ಆಂತೋನಿಯ ವಾರ್ಷಿಕ ಮಹೋತ್ಸವವು ರವಿವಾರ ನಡೆಯಿತು. ಮಂಗಳೂರು ಧರ್ಮಪ್ರಾಂತದ ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ದಾನ ಬಲಿಪೂಜೆ ಅರ್ಪಿಸಿ, ಪ್ರವಚನ ನೀಡಿದರು.
ಈ ಸಂದರ್ಭ ‘ಯುನೈಟೆಡ್ ಕ್ಯಾಥೊಲಿಕ್ಸ್’ ಪೇಜ್‌ಬುಕ್ ಸಂತ ಆಂತೋನಿಯವರ ಜೀವನಕ್ಕೆ ಸಂಬಂಧಿಸಿ ನಡೆಸಿದ ಕ್ವಿಝ್ ಸ್ಪರ್ಧೆಯ ಅದೃಷ್ಟ ಚೀಟಿಯನ್ನು ಎತ್ತುವ ಮೂಲಕ ಬಿಷಪರು ವಿಜೇತರನ್ನು ಘೋಷಿಸಿದರು. ಅಲ್ಲದೆ ಅರ್ಹರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಸಹಾಯಕ ನಿರ್ದೇಶಕ ಫಾ. ರೋಶನ್ ಡಿಸೋಜ ನೊವೇನ ಪ್ರಾರ್ಥನೆ ನಡೆಸಿಕೊಟ್ಟರು. ಸಂಸ್ಥೆಯ ನಿರ್ದೇಶ ಫಾ. ಒನಿಲ್ ಡಿಸೋಜ ವಂದಿಸಿದರು.
Next Story





