Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಿಮಿಷಗಳಲ್ಲೇ 2 ಕೋಟಿಗೆ ಜಾಗ ಖರೀದಿಸಿ 18...

ನಿಮಿಷಗಳಲ್ಲೇ 2 ಕೋಟಿಗೆ ಜಾಗ ಖರೀದಿಸಿ 18 ಕೋಟಿಗೆ ಮಾರಾಟ: ರಾಮ ಜನ್ಮಭೂಮಿ ಟ್ರಸ್ಟ್ ವಿರುದ್ಧ ಭೂ ಹಗರಣದ ಆರೋಪ

ಟ್ವಿಟರ್‌ ನಾದ್ಯಂತ #RamMandirScam ಟ್ರೆಂಡಿಂಗ್

ವಾರ್ತಾಭಾರತಿವಾರ್ತಾಭಾರತಿ13 Jun 2021 10:49 PM IST
share
ನಿಮಿಷಗಳಲ್ಲೇ 2 ಕೋಟಿಗೆ ಜಾಗ ಖರೀದಿಸಿ 18 ಕೋಟಿಗೆ ಮಾರಾಟ: ರಾಮ ಜನ್ಮಭೂಮಿ ಟ್ರಸ್ಟ್ ವಿರುದ್ಧ ಭೂ ಹಗರಣದ ಆರೋಪ

ಲಕ್ನೋ: ಕಳೆದ ವರ್ಷ ಕೇಂದ್ರ ಸರಕಾರ  ಸ್ಥಾಪಿಸಿದ ರಾಮ ಮಂದಿರ ಟ್ರಸ್ಟ್ ಅಕ್ರಮ ಭೂ ಹಗರಣದಲ್ಲಿ ಭಾಗಿಯಾಗಿದೆ ಎಂದು ಉತ್ತರ ಪ್ರದೇಶದ ಎರಡು ವಿರೋಧ ಪಕ್ಷಗಳು ರವಿವಾರ ಆರೋಪಿಸಿವೆ.‌ ಈ ಪ್ರಕರಣದ ಕುರಿತು ಟ್ವಿಟರ್ ನಾದ್ಯಂತ #RamMandirScam ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

 ಈ ವರ್ಷದ ಮಾರ್ಚ್ ನಲ್ಲಿ ಈ ವ್ಯವಹಾರ ನಡೆದಿದೆ ಎಂದು ಸಮಾಜವಾದಿ ಪಕ್ಷ (ಎಸ್ಪಿ) ಹಾಗೂ  ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿಕೊಂಡಿವೆ. ಇದರಲ್ಲಿ ಇಬ್ಬರು ರಿಯಲ್ ಎಸ್ಟೇಟ್ ಡೀಲರ್ ಗಳು ಒಬ್ಬ ವ್ಯಕ್ತಿಯಿಂದ  2 ಕೋಟಿ ರೂ.ಗೆ ಆಸ್ತಿಯನ್ನು ಖರೀದಿಸಿ ಅದನ್ನು ನಿಮಿಷಗಳ ನಂತರ  ಟ್ರಸ್ಟ್ ಗೆ  18.5 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೇವಾಲಯದ ಟ್ರಸ್ಟ್ ಈ  ಆರೋಪವನ್ನು ಕ್ಷುಲ್ಲಕವೆಂದು ತಳ್ಳಿ ಹಾಕಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆ ಹಾಗೂ  ನಿರ್ವಹಣೆಗೆ 2020 ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಎಂಬ ಟ್ರಸ್ಟ್  ಸ್ಥಾಪಿಸಿತ್ತು. ತೀರ್ಪಿನಲ್ಲಿ ಸುಮಾರು 70 ಎಕರೆ ಭೂಮಿಯನ್ನು ನೀಡಲಾಯಿತು ಹಾಗೂ  ಅದರ 15 ಸದಸ್ಯರಲ್ಲಿ 12 ಮಂದಿಯನ್ನು ಕೇಂದ್ರವು ನಾಮನಿರ್ದೇಶನ  ಮಾಡಿದೆ.

ಸ್ಥಳೀಯ ಬಿಜೆಪಿ ಮುಖಂಡರು ಹಾಗೂ  ಕೆಲವು ಟ್ರಸ್ಟ್ ಸದಸ್ಯರ ಸಹಕಾರದಿಂದಾಗಿ  ಮೋಸದ ಭೂ ವ್ಯವಹಾರ ನಡೆದಿದೆ ಎಂದು ಸಮಾಜವಾದಿ ಪಕ್ಷದ ಮಾಜಿ ಶಾಸಕ ಹಾಗೂ  ಉತ್ತರ ಪ್ರದೇಶದ ಮಾಜಿ ಸಚಿವ ಪವನ್ ಪಾಂಡೆ ಇಂದು ಅಯೋಧ್ಯೆಯಲ್ಲಿ ನಡೆದ ಪತ್ರಿಕಾಗೋಷ್ಠಿ ಆರೋಪಿಸಿದರು.

"ಈ ಆಸ್ತಿಯ  ಬೆಲೆಯು ನಿಮಿಷಗಳಲ್ಲಿ ರೂ.  2  ಕೋಟಿಯಿಂದ ರೂ. 18.5 ಕೋಟಿಗೆ ಏರಿದೆ . ಇದರರ್ಥ 16.5 ಕೋ.ರೂ. ಲೂಟಿಯಾಗಿದೆ. ಇದರ ಸಿಬಿಐ ವಿಚಾರಣೆ ನಡೆಯಬೇಕು’’ ಎಂದು ಎಸ್ಪಿ ನಾಯಕ ಆಗ್ರಹಿಸಿದರು.

"ಕೋಟ್ಯಂತರ ಜನರು ರಾಮ್ ಟೆಂಪಲ್ ಟ್ರಸ್ಟ್ ಗೆ ದೇಣಿಗೆ ನೀಡಿದರು. ಅವರು ತಮ್ಮ ಉಳಿತಾಯವನ್ನು ದಾನ ಮಾಡಿದ್ದಾರೆ. ಇದು ದೇಶದ 120 ಕೋಟಿ ಜನರಿಗೆ ಮಾಡಿದ ಅವಮಾನ" ಎಂದು ಪಾಂಡೆ ಹೇಳಿದರು.

ಎಎಪಿ ಮುಖಂಡ ಹಾಗೂ  ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಇದೇ ರೀತಿಯ  ಆರೋಪಗಳನ್ನು ಮಾಡಿದ್ದಾರೆ.

"ಭಗವಾನ್  ರಾಮನ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯಲಿದೆ ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದರೆ ಈ ದಾಖಲೆಗಳು ಕೋಟ್ಯಂತರ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ತೋರಿಸುತ್ತದೆ" ಎಂದು ಸಿಂಗ್ ಹೇಳಿದರು.

"ಒಂದು ಶತಮಾನದಿಂದ ಈ ಎಲ್ಲ ರೀತಿಯ ಆರೋಪಗಳನ್ನು ಮಾಡಲಾಗಿದೆ. ಮಹಾತ್ಮ ಗಾಂಧಿಯವರ ಹತ್ಯೆಗೆ ಕೆಲವರು ನಮ್ಮನ್ನು ದೂಷಿಸಿದ್ದಾರೆ. ಇಂತಹ ಆರೋಪಗಳ ಬಗ್ಗೆ ನಾವು ಚಿಂತಿಸುವುದಿಲ್ಲ. ನೀವೂ ಚಿಂತಿಸಬೇಡಿ " ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಕಾರ್ಯದರ್ಶಿಯೂ ಆಗಿರುವ ವಿಎಚ್‌ಪಿ ನಾಯಕ ಚಂಪತ್ ರೈ ಹಾರಿಕೆಯ ಉತ್ತರ ನೀಡಿದ್ದಾರೆ.

"ರಾಮಮಂದಿರವು ದೇಶದ ಹಲವಾರು ಭಕ್ತರ ಪಾಲಿಗೆ ನಂಬಿಕೆಯ ವಿಷಯವಾದರೆ ಬಿಜೆಪಿ ಪಕ್ಷಕ್ಕೆ ಅದೊಂದು ಮಾರಾಟದ ಸರಕು ಮಾತ್ರ" ಎಂದು ಬಳಕೆದಾರರೋರ್ವರು ಕಮೆಂಟ್‌ ಮಾಡಿದ್ದಾರೆ. ಈಗಾಗಲೇ ಟ್ವಿಟರ್‌ ನಲ್ಲಿ 40,000ಕ್ಕೂ ಹೆಚ್ಚು #RamMandirScam ಹ್ಯಾಶ್‌ ಟ್ಯಾಗ್‌ ಅನ್ನು ಬಳಸಲಾಗಿದ್ದು, ದೇಶದಾದ್ಯಂತ ಟ್ರೆಂಡಿಂಗ್‌ ಆಗಿದೆ.

Anil Mishra, Trustee of #RamMandirTrust running away from questions on #RamMandirScam pic.twitter.com/F5atQ1Gvg1

— Siddharth Setia (@ethicalsid) June 13, 2021

Now "Ram Mandir Scam" is looking the biggest scam of Indian history. Hindutwa even can use Ram as business partner!

राम मंदिर#RamMandirScam pic.twitter.com/UsKudo1W38

— Muzammil Raza (@Muzammi79151504) June 13, 2021

Champat rai ki scheme#RamMandirScam pic.twitter.com/5nu0lyv3C4

— Maninder Kaur Pabla (@maninder811) June 13, 2021

#RamMandirScam
There is a board approval required before any trust purchase an land,in 5 mins how was proposal passed for Ram Janam Bhoomi and land was purchased @SanjayAzadSln #RamMandirScam pic.twitter.com/e7hnuCjbR5 pic.twitter.com/fSXbrSTYxr#JusticeForJudgeLoya

— Nandkishor Kaushik (@NandkishorRAGA) June 13, 2021

Seeing #RamMandirScam is trending Bhakts are like: pic.twitter.com/mQFMmEP798#JusticeForJudgeLoya

— Nandkishor Kaushik (@NandkishorRAGA) June 13, 2021

Sultan Ansari bought land valued at Rs 5.7 crores from Kusum Pathak for Rs 2 crores.

Then #RamMandir Trust bought the same land from Ansari five minutes after he bought it from Kusum for Rs 18.5 crores. #RamMandirScam pic.twitter.com/EUyQOEgG8X

— Vivek Kumar (@Vivek3189) June 13, 2021

People after knowing of scam #RamMandirScam pic.twitter.com/FoqnF1OMPz

— IamAbraham007 (@IAbraham007) June 13, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X